ಪುತ್ತೂರು ಚುನಾವಣಾ ರಣಕಣಕ್ಕೆ ಯೋಗಿ ಎಂಟ್ರಿ- ಸಿದ್ದತೆ ಪೂರ್ಣ- ಯೋಗಿ ರೋಡ್‌ ಶೋ ಗೆ ತೆರೆದ ವಾಹನ ಆಗಮನ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುವ ಹಿನ್ನಲೆಯಲ್ಲಿ ಭರದ ಸಿದ್ದತೆ ನಡೆದಿದೆ. ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ನಗರದಾದ್ಯಂತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಸುಮಾರು 700ರಷ್ಟು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಯೋಗಿ ಆದಿತ್ಯನಾಥ್‌ ರೋಡ್ ಶೋ ನಡೆಸಲಿರುವ ಅಲಂಕೃತ ತೆರೆದ ವಾಹನ ತಪಾಸಣೆಯ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಗೆ ಆಗಮಿಸಿದ್ದು, ರಿಹರ್ಸಲ್ ಮಾಡಲಾಗುತ್ತಿದೆ. ಯೋಗಿ ಆಗಮನದ ಕ್ಷಣಗಣನೆ ಆರಂಭಗೊಂಡಿದ್ದು, ಹಿಂದೂ ಹೃದಯ ಸಾಮ್ರಾಟ ಯೋಗಿ ಆದಿತ್ಯನಾಥ್‌ ಅವರನ್ನು ನೋಡಲು ಮತ್ತು ಮಾತು ಕೇಳಲು ಜನರು ಕಾತರದಿಂದ ಕಾಯುತ್ತಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here