ದೇಶಕ್ಕಾಗಿ ನಮ್ಮ ತ್ಯಾಗವಿರಲಿ -ಬೆಟ್ಟಂಪಾಡಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಕಿಶೋರ್ ಬೊಟ್ಯಾಡಿ

0

ಬೆಟ್ಟಂಪಾಡಿ: ದೇಶದ ಹಿತಕ್ಕಾಗಿ ಅನೇಕ ಹಿರಿಯರ, ಕಾರ್ಯಕರ್ತರ ಬಲಿದಾನ, ತ್ಯಾಗದಿಂದ ಕಟ್ಟಲ್ಪಟ್ಟಿರುವ ಬಿಜೆಪಿ ಪಕ್ಷವು ಹಿಂದುತ್ವದ ಪರವಾಗಿ ಅನೇಕ ಸುಧಾರಣಾ ನೀತಿಗಳನ್ನು ತರುವ ಕೆಲಸ ಮಾಡಿದೆ. ವ್ಯಕ್ತಿಯ ಸ್ವಾರ್ಥ ಹಿತಕ್ಕಿಂತ ದೇಶದ ಹಿತಕ್ಕಾಗಿ ನಮ್ಮ ತ್ಯಾಗವಿರಲಿ ಎಂದು ಬಜರಂಗದಳ ಮಾಜಿ ಸಂಚಾಲಕ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.


ಬೆಟ್ಟಂಪಾಡಿಯಲ್ಲಿ ಮೇ 5 ರಂದು ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.


ಕೇಂದ್ರದಲ್ಲಿ ನರೇಂದ್ರ ಮೋದಿಯವರಿಗೆ ಸಂಪೂರ್ಣ ಬಹುಮತದ ಸ್ಥಾನಗಳು ಬಿಜೆಪಿ ಪಾಲಿಗೆ ದೊರೆತಿರುವುದರಿಂದ ಭಾರತದಲ್ಲಿ ಹಿಂದುತ್ವದ ಪರವಾದ ಕಾನೂನು ನಿಯಮಗಳನ್ನು ತರಲಾಗಿದೆ. ದೇಶದ ಮೂಲೆ ಮೂಲೆಯಲ್ಲಿನ ಒಂದೊಂದು ಸೀಟುಗಳೂ ಮೋದಿಯವರ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.‌ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಈ ದೇಶವನ್ನು ಹಿಂದುತ್ವದ ಭದ್ರ ನೆಲೆಯಾಗಿಸುವ ಮೋದಿಯವರ ಪ್ರಯತ್ನದಲ್ಲಿ ನಾವೆಲ್ಲಾ ಸಹಕಾರಿಗಳಾಗೋಣ. ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸುವ ಮೂಲಕ ಕಾರ್ಯಕರ್ತರೆಲ್ಲಾ ಒಗ್ಗೂಡಿ ಕೆಲಸ ಮಾಡೋಣ’ ಎಂದು ಅವರು ಕರೆ ನೀಡಿದರು.


ವೇದಿಕೆಯಲ್ಲಿ ಹುಬ್ಬಳ್ಳಿ ರಮೇಶ್, ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ‌ ವಿನೋದ್ ಕುಮಾರ್ ರೈ, ಚುನಾವಣಾ ಪ್ರಮುಖರಾದ ಸದಾನಂದ ಶೆಟ್ಟಿ ಕೊಮ್ಮಂಡ, ಕರುಣಾಕರ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು. ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here