30 ವರ್ಷಗಳ ಬೇಡಿಕೆ ಈಡೇರಿಸಲು ಬಿಜೆಪಿ ಬರಬೇಕಾಯಿತು – ಹಾರಾಡಿಯಲ್ಲಿ ಬಿಜೆಪಿ ಮತಯಾಚನೆ ವೇಳೆ ಮತದಾರರ ಅಂತರಾಳದ ಮಾತು

0

ಪುತ್ತೂರು: ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಬಿಜೆಪಿ ಬರಬೇಕಾಯಿತು. ಈ ರಸ್ತೆ ನಮಗೆ ಮಾತ್ರವಲ್ಲ ಸಮಸ್ತ ಪುತ್ತೂರಿನ ಸಾರ್ವಜನಿಕರ ಅಗತ್ಯವಾಗಿದ್ದು, ಬೇಡಿಕೆ ಈಡೇರಿದೆ ಎಂದು ಹಾರಾಡಿಯಲ್ಲಿ ಬಿಜೆಪಿ ಮನೆ ಮನೆ ಸಂಪರ್ಕದ ವೇಳೆ ಮತದಾರರು ತಮ್ಮ ಅನುಭವ ಹಂಚಿಕೊಂಡರು.


ಹಾರಾಡಿಯ ರೈಲ್ವೇ ನಿಲ್ದಾಣದ ರಸ್ತೆಯ ಬಳಿಯ ಮತದಾರರ ಮನೆಗೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಅವರ ನೇತೃತ್ವದಲ್ಲಿ ನಡೆದ ಸಂಪರ್ಕ ಅಭಿಯಾನದಲ್ಲಿ ಮತದಾರರು ತಮ್ಮ ಅನುಭವ ಹಂಚಿಕೊಂಡರು. ಬಿಜೆಪಿ ಬೂತ್ ಸಮಿತಿ ಕಿರಣ್ ಶಂಕರ್ ಮಲ್ಯ, ಇಂದು ಶೇಖರ್, ದುರ್ಗಾವಾಹಿನಿಯ ನಂದಿನಿ, ವಿಶ್ವಹಿಂದು ಪರಿಷತ್ ನ ನವೀನ್ , ಸಂಕಪ್ಪ ಭಂಡಾರಿ, ಗೋ ರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ, ಗಣೇಶ್ ಪೈ, ನೀಲಂತ್ ಬೊಳುವಾರು, ಕೃಷ್ಣಾನಂದ ಸೂರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here