ಪುತ್ತೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪಿಸಿರುವುದು ರಾಜ್ಯದ ಹಿಂದುಗಳ ಮನಸ್ಸಿಗೆ ನೋವಾಗಿದೆ. ಇದರ ವಿರುದ್ಧ ಮನೆ ಮನೆಗಳಲ್ಲಿ ಪೋಸ್ಟರ್ ಅಭಿಯಾನ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಶ್ವಹಿಂದು ಪರಿಷತ್ತಿನ ಯುವ ವಿಭಾಗವಾಗಿರುವ ರಾಷ್ಟ್ರಭಕ್ತ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದರಿಂದ ರಾಜ್ಯದ ಹಿಂದುಗಳ ಮನಸ್ಸಿಗೆ ನೋವಾಗಿದೆ. ಈ ಪ್ರಸ್ತಾವನೆಯ ವಿರುದ್ಧ ಬಜರಂಗದಳ ಈಗಾಗಲೇ ಅಭಿಯಾನ ಪ್ರಾರಂಭಿಸಿದೆ. ಇದರೊಂದಿಗೆ ಪೋಸ್ಟರ್ ಅಭಿಯಾನ, ಎಲ್ಲಾ ದೇವಸ್ಥಾನ, ದೈವಸ್ಥಾನ ಹಾಗೂ ಭಜನಾಮಂದಿರ, ಮಠ ಮಂದಿರಗಳಲ್ಲಿ ಹನುಮಾನ್ ಚಾಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಪುತ್ತೂರು ಬಜರಂಗದಳದ ಶಕ್ತಿ ಕೇಂದ್ರ: ದೇಶಭಕ್ತಿ ಸಂಘಟನೆಯಾಗಿರುವ ಬಜರಂಗದಳ ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳನ್ನು ಕಳೆದ 38 ವರ್ಷಗಳಿಂದ ಮಾಡಿಕೊಂಡು ಬಂದಿದೆ. ಸಾಧು ಸಂತರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ದೇಶದ ಸುಮಾರು 60 ಸಾವಿರ ಗ್ರಾಮಗಳಲ್ಲಿ ಸುಮಾರು 25 ಲಕ್ಷ ಕಾರ್ಯಕರ್ತರಿದ್ದಾರೆ. ಕರ್ನಾಟದಲ್ಲಿ 2 ಸಾವಿರ ಗ್ರಾಮಗಳಲ್ಲಿ ಬಜರಂಗದಳದ ಸಾಮಾಜಿಕ ಕೆಲಸ ನಡೆಯುತ್ತಿದೆ. ಪುತ್ತೂರು ಬಜರಂಗ ದಳದ ಶಕ್ತಿಕೇಂದ್ರವಾಗಿದೆ. ಪುತ್ತೂರಿನಲ್ಲಿರುವಷ್ಟು ಶಾಖೆ ಬೇರೆ ಕಡೆ ಇಲ್ಲ ಎಂದು ಶರಣ್ ಪಂಪ್‌ವೆಲ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.
ಮತ ಕೇಳಲು ಬರುವ ಕಾಂಗ್ರೇಸಿಗರಿಗೆ ಪ್ರವೇಶವಿಲ್ಲ, ಫಲಕ ಬಿಡುಗಡೆ:
’ಕಾಂಗ್ರೆಸಿಗರಿಗೆ ಮತಕೇಳಲು ಪ್ರವೇಶವಿಲ್ಲ’ ಎಂಬ -ಲಕವನ್ನು ಶರಣ್‌ಪಂಪ್‌ವೆಲ್ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಕಾಂಗ್ರೆಸ್‌ನವರು ಮತ ಕೇಳಲು ಬಂದಾಗ ಈ -ಲಕವನ್ನು ಹಿಂದುಗಳು ತಮ್ಮ ಮನೆ ಮುಂದೆ ಅಳವಡಿಸುವಂತೆ ವಿನಂತಿಸಿದರು.
ನಮ್ಮ ಉದ್ದೇಶ ಕಾಂಗ್ರೆಸ್ ಸೋಲಿಸುವುದು
ಪ್ರಜಾಪ್ರಭುತ್ವದಲ್ಲಿ ಯಾರಿಗೇ ಬೇಕಾದರೂ ಚುನಾವಣೆಯಲ್ಲಿ ನಿಲ್ಲಬಹುದು. ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಚುನಾವಣೆಗೆ ನಿಂತಿದ್ದಾರೆ. ಈಗಾಗಲೇ ಅವರ ಕೆಲಸವನ್ನು ಅವರು ಮಾಡುತ್ತಾ ಇದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಪ್ರಸ್ತಾಪ ಮಾಡಿದೆ. ಹಾಗಾಗಿ ನಾವು ಕಾಂಗ್ರೆಸ್ ಸೋಲಿಸುವ ಉದ್ದೇಶ ಇಟ್ಟಿದ್ದೇವೆ. ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಸುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿ ಕಾಂಗ್ರೆಸ್ ಬರಬಾರದು ಎಂದು ಶರಣ್ ಪಂಪ್‌ವೆಲ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.