ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯ: ಬಳಿಕ ಮನೆಮನೆ ಮತಬೇಟೆ

0

ಕ್ಷೇತ್ರಗಳಲ್ಲಿ ಹೊರಗಿನವರಿಗೆ ನಿರ್ಬಂಧ

ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ
ಮತದಾನ ಮುಕ್ತಾಯದ 48 ಗಂಟೆ ಮುಂಚೆ ಅಂತ್ಯ
ಸ್ಟಾರ್ ಪ್ರಚಾರಕರು, ಮುಖಂಡರು ಕ್ಷೇತ್ರ ಬಿಟ್ಟು ತೆರಳಬೇಕು
ಸಂಜೆಯ ಬಳಿಕ ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ

ಪುತ್ತೂರು: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೇ.8ರಂದು ಸಂಜೆ 6ಕ್ಕೆ ತೆರೆ ಬೀಳಲಿದೆ. ಮತದಾನ ಮುಕ್ತಾಯದ 48 ಗಂಟೆಗೆ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.

ಈ ಬಳಿಕ ಶೂನ್ಯ ಅವಧಿ ಎಂದು ಚುನಾವಣಾ ಆಯೋಗವು ಪರಿಗಣಿಸುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಕ್ಷೇತ್ರದ ಹೊರಗಿನವರು ಉಳಿಯುವಂತಿಲ್ಲ. ಮೇ.9ರಂದು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಂಡು ಅಂದು ಸಂಜೆ 6 ಗಂಟೆ ಒಳಗೆ ಮುಗಿಸಬೇಕು. ಬಹಿರಂಗ ಪ್ರಚಾರ ಮುಗಿದ ಮೇ 8ರ ಸಂಜೆ 6 ಗಂಟೆ ಬಳಿಕ ಸ್ಟಾರ್ ಪ್ರಚಾರಕರು, ಕ್ಷೇತ್ರದ ಹೊರಗಿನ ಮುಖಂಡರು ಕ್ಷೇತ್ರ ತೊರೆಯಬೇಕು. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಜೆಯ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ.

LEAVE A REPLY

Please enter your comment!
Please enter your name here