SPYSS ಸಮಿತಿಯ ಪುತ್ತೂರಿನ 10 ನೇ ಶಾಖೆ ಆರಂಭ

0

ಪುತ್ತೂರು: ಪುತ್ತೂರಿನ ಕಾರಣಿಕದ ದೈವಬೀಡು ಬಲ್ನಾಡು ಶ್ರೀ ದಂಡ ನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ SPYSS ಸಮಿತಿಯ ಪುತ್ತೂರಿನ 10 ನೇ ಶಾಖೆಯನ್ನು ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ತಾಲೂಕು ಶಿಕ್ಷಕರ ಮತ್ತು ಆತ್ಮೀಯ ಬಂಧುಗಳ ಸಹಕಾರದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು.

ಶ್ರೀ ದಂಡನಾಯಕ ಉಳ್ಳಾಳ್ತಿ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ದೀಪಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಹರಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವಾನ್ ದಾಸ್ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ದಂಡನಾಯಕ ಉಳ್ಳಾಳ್ತಿ ದೇವಸ್ಥಾನ ಕಾಂತಿಲ ವ್ಯವಸ್ಥಾಪನಾ ಮಂಡಳಿಯ ಮಾಧವ ಗೌಡ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಉಷಾ ಮಣಿ ಪ್ರಾರ್ಥಿಸಿ ,ಶುಭ ಸ್ವಾಗತಿಸಿ, ವಾರಿಜ ನಿರೂಪಿಸಿ, ಸುರೇಖಾ ವಂದಿಸಿ, ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here