ಪಟ್ಟೆ ಪ್ರತಿಭಾ ಪ್ರೌಢಶಾಲಾ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 96.87%

0

ಬಡಗನ್ನೂರುಃ ಪ್ರತಿಭಾ ಪ್ರೌಢಶಾಲಾ ಪಟ್ಟೆ ಬಡಗನ್ನೂರು 2022-23 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 96.87℅ ಫಲಿತಾಂಶ ಲಭಿಸಿದೆ.

ಒಟ್ಟು 32 ವಿದ್ಯಾರ್ಥಿಗಳಲ್ಲಿ 8 ಹುಡುಗರು ಹಾಗೂ 24 ಹುಡುಗಿಯರು ಒಟ್ಟು 32 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಒಬ್ಬ ಅನುತ್ತಿರ್ಣಗೊಂಡು 31 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಈ ಪೈಕಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 21 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವೀತಿಯ ದರ್ಜೆಯಲ್ಲಿ ಉತ್ತೀರ್ಣಗೊಂಡು ಶೇಕಡಾ 96.87 ಲಭಿಸಿದ್ದು “ಎ” ಶ್ರೇಣಿ ಫಲಿತಾಂಶ ಪಡೆದುಕೊಂಡಿದೆ. ಪಲ್ಲವಿ ಬಿ.ಕೆ 606, ಯಸಸ್ವಿನಿ ಪಿ 584, ಜ್ಯೋತಿಕಾ ಪಿ ಎಸ್ 562, ದೀಕ್ಷಾ ಪಿ ಯಂ 552, ಅನ್ವಿತಾ ಬಿ 545, ಪಡೆದುಕೊಂಡಿದ್ದಾರೆ. ಪಲ್ಲವಿ ಬಿ.ಕೆ ಹಾಗೂ ಜ್ಯೋತಿಕಾ ಪಿ.ಎಸ್ ಕನ್ನಡ ಭಾಷಾ ಪಾಠದಲ್ಲಿ 125 ರಲ್ಲಿ 125 ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here