ಈ ಬಾರಿಯ ನಿರ್ಧಾರ ಒಂದೇ ಪುತ್ತಿಲರೊಂದಿಗೆ ಮತದಾರ, ಹಿಂದುತ್ವದ ಸರಕಾರ – ಪುತ್ತಿಲ ಪರಿವಾರ ಸಂಗಮ ರೋಡ್ ಶೋದಲ್ಲಿ ಆದರ್ಶ ಗೋಖಲೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ನಮ್ಮ ಸ್ಟಾರ್ ನಾಯಕರು ಕಾರ್ಯಕರ್ತರು ಎಂಬ ಘೋಷ ವಾಕ್ಯದೊಂದಿಗೆ ಅವರ ಬೆಂಬಲಿಗರಿಂದ ಬೃಹತ್ ರೋಡ್ ಶೋ ಮೇ 8 ರಂದು ಪುತ್ತೂರು ಬೊಳುವಾರಿನಿಂದ ಆರಂಭಗೊಂಡು ದರ್ಬೆಯಲ್ಲಿ ಸಮಾವೇಶಗೊಂಡಿತು.


ಈ ಭಾರಿಯ ನಿರ್ದಾರ ಒಂದೇ ಪುತ್ತಿಲರೊಂದಿಗೆ ಮತದಾರ, ಹಿಂದುತ್ವದ ಸರಕಾರ ಎಂದ ಅವರು ನಮ್ಮ ಅರುಣಣ್ಣ ಕೇಸರಿ ಶಲ್ಯವನ್ನು ಬೀಸಿಕೊಂಡು ವಿಧಾನಸಭೆಯನ್ನು‌ ಪ್ರವೇಶಸಿಸಬೇಕೆಂದರು. ಹಿಂದುಗಳ ವಿರುದ್ದ ತೊಂದರೆಯಾದಾಗ ವಿಧಾನಸಭೆಯಲ್ಲಿ ಹಿಂದುತ್ವದ ಪರ ಘರ್ಷಿಸುವ ಒಂದು ಧ್ವನಿ ಬೇಕು.‌ ಅದನ್ನು ನಾವು ನೀವು ಈಡೇರಿಸುವ ಕಾಲ ಹತ್ತಿರ ಬಂದಿದೆ ಎಂದರು.

ಮೋದಿ ಮೋಡೆಲ್, ಯೋಗಿ ಮೋಡೆಲ್ ಬೇಕು ಕಾರ್ಯರೂಪಕ್ಕೆ ಬರಬೇಕಾದರೆ ಪುತ್ತೂರಿನ ಮತದಾರರು ಅತ್ಯಂತ ದೊಡ್ಡ ಮನಸ್ಸು ಮಾಡಿದರೆ ಒಂದು ಇತಿಹಾಸವನ್ನು ಮೆ 13 ಕ್ಕೆ ಮಾಡಬೇಕಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರ ಬ್ಯಾಟ್ ಚಿಹ್ಮೆಗೆ ಮತ ನೀಡಿ. ಮೇ 13 ರ ವಿಜಯಯೋತ್ಸವದಲ್ಲಿ ಇದೆ ದರ್ಬೆಯಲ್ಲಿ ಸೇರೋಣ ಎಂದರು.


ಭ್ರಷ್ಟಾಚಾರ ಬಿಟ್ಟು ಪ್ರೀತಿ ವಿಶ್ವಾದ ರಾಜಕಾರಣವಾಗಬೇಕು:
ಅರುಣ್ ಕುಮಾರ್ ಪುತ್ತಿಲ ಅವರು ತುಳುವಿನಲ್ಲಿ ಮಾತನಾಡಿ ಮೇ 10 ರ ಚುನಾವಣೆಯ ಕೊನೆಯ ಭಾಗದಲ್ಲಿ ನನ್ನೊಂದಿಗೆ ಈ ಕ್ಷೇತ್ರದಲ್ಲಿ ಧರ್ಮ ಆಧಾರಿತ ರಾಜಕಾರಣ ಆಗಬೇಕೆಂದು ಹೆಜ್ಜೆ ಹಾಕಿದ ನಿಮಗೆ ಕೃತಜ್ಣತೆಗಳು. ಇದು ಕಾರ್ಯಕರ್ತರ ಗೆಲುವು‌. ಚುನಾವಣೆಗೆ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ವಿಜಯದ ಸಂಕೇತ ನೀಡಿದ ನಿಮಗೆ ಕೃತಜ್ಣತೆಗಳು. ನಿಮ್ಮ ಮನೆ ಮಗನಾಗಿ ಮುಂದಿನ 5 ವರ್ಷ ದಿನದ 24 ಗಂಟೆ ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕು. ಎರಡು ಪಕ್ಷಗಳಿಂದ ಅಪಪ್ರಚಾರಕ್ಕೆ ಕಾರ್ಯಕರ್ತರೇ ಉತ್ತರ ನೀಡಲಿದ್ದಾರೆ.


ಚುನಾವಣೆ ಸಂದರ್ಭದಲ್ಲಿ ಎರಡು ರಾಷ್ಡ್ರೀಯ ಪಕ್ಷಗಳು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಾರ್ಯಕರ್ತರೇ ಉತ್ತರ ನೀಡಲಿದ್ದಾರೆ.
ಕ್ಷೇತ್ರದ ಜನ ನಿರ್ಧಾರ ಈ ಭಾರಿ ಚುನಾವಣೆಯಲ್ಲಿ ಕೇಸರಿ, ಧರ್ಮ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾಳೆ ಕಾರ್ಯಕರ್ತರು ಪೇಟೆಗೆ ಬಾರದೆ ತಮ್ಮ ತಮ್ಮ ಬೂತ್ ನಲ್ಲಿ ಧರ್ಮದ ರಾಜಕೀಯಕ್ಕೆ ಮುನ್ನುಡಿ ಬರೆಯಿರಿ ಎಂದ ಅವರು ಧರ್ಮ ಆಧಾರಿತ ರಾಜಕಾರಣಕ್ಕೆ ಬ್ಯಾಟ್ ಚಿಹ್ನೆಗೆ ಮತ ನೀಡಿ ಎಂದರು. ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರು ಪುತ್ತಿಲರಿಗೆ ಜೈಕಾರ ಹಾಕಿದರು.

LEAVE A REPLY

Please enter your comment!
Please enter your name here