ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ-ಪುತ್ತೂರು ತಾಲೂಕಿಗೆ ಶೇ.91 ಫಲಿತಾಂಶ

0

ತೆಂಕಿಲ ವಿವೇಕಾನಂದದ ಹಿಮಾನಿ ಎ.ಸಿ, ನರಿಮೊಗರು ಸಾಂದೀಪನಿಯ ತೇಜಸ್, ಕಾಣಿಯೂರು ಪ್ರಗತಿಯ ಉತ್ತಮ್ ಜಿ.ಗೆ 692 ಅಂಕ
6 ಸರಕಾರಿ ಪ್ರೌಢಶಾಲೆ, 3 ಅನುದಾನಿತ, 12ಅನುದಾನ ರಹಿತ ಶಾಲೆಗಳಿಗೆ ಶೇ.100 ಫಲಿತಾಂಶ

ಪುತ್ತೂರು:2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ಹಾಗೂ ಕಡಬ ತಾಲೂಕು ಸೇರಿದಂತೆ ಪುತ್ತೂರಿಗೆ ಶೇ.91 ಫಲಿತಾಂಶ ಲಭಿಸಿದೆ. 6 ಸರಕಾರಿ ಪ್ರೌಢಶಾಲೆ, 3 ಅನುದಾನಿತ ಹಾಗೂ 21 ಅನುದಾನ ರಹಿತ ಶಾಲೆಗಳಿಗೆ ಶೇ.100 ಫಲಿತಾಂಶ ಲಭಿಸಿದೆ.

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಹಿಮಾನಿ ಎ.ಸಿ., ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ತೇಜಸ್ ಹಾಗೂ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಉತ್ತಮ್ ಜಿ 623 ಅಂಕಗಳೊಂದಿಗೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿಷ್ಣುಪ್ರಸಾದ್ 622 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸರಕಾರಿ ಪ್ರೌಢಶಾಲೆಗಳಾದ ಸರಕಾರಿ ಪದವಿ ಪೂರ್ವ ಕಾಲೇಜು ಕೊಣಾಲು, ಸರಕಾರಿ ಪ್ರೌಢಶಾಲೆ ದೋಳ್ಪಾಡಿ, ಸರಕಾರಿ ಪ್ರೌಢ ಶಾಲೆ ಹಿರೆಬಂಡಾಡಿ, ಸರಕಾರಿ ಪ್ರೌಢ ಶಾಲೆ ಮಣಿಕ್ಕರ, ಮೊರಾರ್ಜಿ ದೇಸಾಯಿ ಶಾಲೆ ಬಲ್ನಾಡು, ಡಾ.ಬಿ.ಆರ್ ಅಂಬೇಡ್ಕರ್ ಶಾಲೆ ಪುತ್ತೂರು, ಅನುದಾನಿತ ಶಾಲೆಗಳಾದ ಸುಳ್ಯಪದವು ಸರ್ವೋದಯ ಪ್ರೌಢಶಾಲೆ, ಪಾಣಾಜೆ ಸುಭೋದ ಪ್ರೌಢ ಶಾಲೆ, ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ, ಅನುದಾನ ರಹಿತ ಶಾಲೆಗಳಾದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ, ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ, ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಸವಣೂರು ವಿದ್ಯಾರಶ್ಮಿ ಪ್ರೌಢಶಾಲೆ, ಕುಂತೂರು ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ, ಆತೂರು ಆಯಿಷಾ ಹೆಣ್ಮಕ್ಕಳ ಶಾಲೆ, ಮರ್ದಾಳ ಗುಡ್‌ಶಪರ್ಡ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಳಂದೂರು ಈಡನ್ ಗಾರ್ಡನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಶೇ.100 ಅಂಕಗಳನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here