ಎಸ್.ಎಸ್.ಎಲ್.ಸಿ. ಕಡಬ ಸರಸ್ವತಿ ಶಾಲೆಗೆ ಶೇ. 95.45 ಫಲಿತಾಂಶ

0


ಕಡಬ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡಬ ಸರಸ್ವತಿ ವಿದ್ಯಾಲಯದ ಪ್ರೌಢಶಾಲೆಗೆ ಶೇ.95.45 ಫಲಿತಾಂಶ ಲಭಿಸಿದೆ. ಶಾಲೆಯಿಂದ ಒಟ್ಟು 44 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 42 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಅದರಲ್ಲಿ 4 ಡಿಸ್ಟಿಂಕ್ಷನ್, 33 ಪ್ರಥಮ ಶ್ರೇಣಿ, 04 ದ್ವಿತೀಯ ಶ್ರೇಣಿಯೊಂದಿಗೆ ಹಾಗೂ 01 ತೃತೀಯ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡು ಶಾಲಾ ಫಲಿತಾಂಶ ಶೇ.95.45% ದಾಖಲಾಗಿದೆ. ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ಸತೀಶ್ ಬಿ ಹಾಗೂ ಕಲಾವತಿ ಬಿ ದಂಪತಿಗಳ ಪುತ್ರಿ ಹರ್ಷಿಣಿ ಬಿ 561 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಎಡಮಂಗಲ ಗ್ರಾಮದ ಫಲಗೇಣಿ ಹರಿಯಪ್ಪ ಪಿ ಹಾಗೂ ವನಿತ ದಂಪತಿಗಳ ಪುತ್ರಿ ಚರಿಷ್ಮಾ 557 ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿರುತ್ತಾಳೆ. ಬಳ್ಪ ಗ್ರಾಮದ ಕಣ್ಕಲ್ ಧನಂಜಯ ಕೆ ಹಾಗೂ ಸುಜಾತ ದಂಪತಿಗಳ ಪುತ್ರಿ ಸ್ಮಿತಾ ಕೆ 543 ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ತೃತೀಯ ಸ್ಥಾನಿಯಾಗಿರುತ್ತಾಳೆ., ದೋಳ್ಪಾಡಿ ಗ್ರಾಮದ ಇಡ್ಯಡ್ಕ ಕಜೆ ಗೋಪಾಲಕೃಷ್ಣ ಹಾಗೂ ವಿಜಯ ದಂಪತಿಗಳ ಪುತ್ರಿ ಮೋನಿಷಾ 537 ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ಚತುರ್ಥ ಸ್ಥಾನಿಯಾಗಿರುತ್ತಾಳೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here