ಕೊಕ್ಕಡ: ತೋಟಕ್ಕೆ ಕಾಡಾನೆ ಲಗ್ಗೆ, ಕೃಷಿ ಹಾನಿ

0

ನೆಲ್ಯಾಡಿ: ಕೊಕ್ಕಡ ಗ್ರಾಮದ ಹಾರ ಎಂಬಲ್ಲಿ ಬಿಜು ಪಿ.ಪಿ.ಎಂಬವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವ ಘಟನೆ ಮೇ 7ರಂದು ರಾತ್ರಿ ನಡೆದಿದೆ.


ಕಾಡಾನೆ ದಾಳಿಯಿಂದ 15ಕ್ಕೂ ಹೆಚ್ಚು ಅಡಿಕೆ ಗಿಡ ಹಾಗೂ ೫೦ಕ್ಕೂ ಹೆಚ್ಚು ಬಾಳೆಗಿಡಗಳು ನಾಶಗೊಂಡಿವೆ. ಬಿಜು ಪಿ.ಪಿ.ಅವರ ತೋಟದ ಪಕ್ಕದಲ್ಲಿ ರಬ್ಬರ್ ತೋಟವಿದ್ದು ಮೌರೀಸ್ ಡಿ.ಸೋಜ ಅವರು ರಾತ್ರಿ ಸುಮಾರು 1.30ರ ವೇಳೆಗೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಬಿಜು ಪಿ.ಪಿ.ಅವರ ತೋಟದಲ್ಲಿ ಶಬ್ದ ಕೇಳಿ ಬರುತ್ತಿದ್ದ ಸಂದರ್ಭ ಟಾರ್ಚ್‌ಲೈಟ್ ಹಾಕಿ ನೋಡಿದ್ದು ಈ ವೇಳೆ ತೋಟಕ್ಕೆ ಆನೆ ದಾಳಿ ನಡೆಸಿರುವುದು ಕಂಡುಬಂದಿದೆ. ಬಳಿಕ ಅವರು ಬಿಜು ಅವರ ಮನೆಯವರಿಗೆ ಮಾಹಿತಿ ನೀಡಿದ್ದರು. ಕೊಕ್ಕಡ, ಕೌಕ್ರಾಡಿ ಗ್ರಾಮದ ಕೆಲ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕೃಷಿ ತೋಟಗಳಿಗೆ ಆನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here