ನೆಲ್ಯಾಡಿ ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.95 ಫಲಿತಾಂಶ

0

ನೆಲ್ಯಾಡಿ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. 95 ತೇರ್ಗಡೆ ಫಲಿತಾಂಶ ಬಂದಿದೆ.


ಪರೀಕ್ಷೆಗೆ ಹಾಜರಾದ 80 ವಿದ್ಯಾರ್ಥಿಗಳ ಪೈಕಿ 76 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.95 ಫಲಿತಾಂಶ ಬಂದಿದೆ. 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಾಕ್ಷಿ 608, ಶ್ರೇಯಸ್ 599, ಅಶೆಲ್ ಪಾಯಸ್ 598, ರೋಹನ್ 591, ಸುಶಾನಿ 586, ಪ್ರಣಮ್ಯ 578, ಪ್ರೇರಣ 571, ವೈಷ್ಣವಿ 564, ಮನ್ವಿತ್ 551, ಅಭಿಜ್ಞಾ 549, ಅನೂಜ್ ಕೆ ಜೋನ್ 532, ದೀಕ್ಷಾ ಡಿ 557, ಅನುಶಾ ಟಿ.ಪಿ. 549, ಧನ್ಯಶ್ರೀ 549, ಇಶಾ ಪ್ರಸಾದ್ 546, ಅಂಜು ಟಿ.ಕೆ. 532 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here