ಪುತ್ತೂರು ವಿಧಾನಸಭಾ ಚುನಾವಣೆ ಹಿನ್ನಲೆ- ಕ್ರಿಮಿನಲ್ ಹಿನ್ನಲೆಯುಳ್ಳ ನಾಲ್ವರ ಗಡಿಪಾರು-ನಾನು ಬಿಜೆಪಿ ಬೆಂಬಲಿಗ ವೈರಲ್ !

0

ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಮಿನಲ್ ಹಿನ್ನಲೆಯುಳ್ಳ ನಾಲ್ವರನ್ನು ಪುತ್ತೂರು ಡಿವೈಎಸ್ಪಿಯವರ ವರದಿಯಂತೆ ದ.ಕ.ಜಿಲ್ಲಾಧಿಕಾರಿ ಗಡಿಪಾರಿಗೆ ಸೂಚಿಸಿದ್ದಾರೆ.


ಬನ್ನೂರು ನಿವಾಸಿಗಳಾದ ಪ್ರಜ್ವಲ್ ರೈ, ಪ್ರತಾಪ್, ಜಗ್ಗ ಯಾನೆ ಅಚ್ಚು, ಅಭಿಜೀತ್ ಅವರನ್ನು ಗಡಿಪಾರು ಮಾಡಲಾಗಿದೆ. ಚುನಾವಣೆ ಸಂದರ್ಭ ಶಾಂತಿಭಂಗ ಮಾಡಬಹುದೆಂಬ ನಿಟ್ಟಿನಲ್ಲಿ ನಗರ ಪೊಲೀಸ್ ಠಾಣೆಯಿಂದ ಡಿವೈಎಸ್ಪಿಯವರಿಗೆ ವರದಿ ಮಾಡಲಾಗಿತ್ತು. ಡಿವೈಎಸ್ಪಿಯವರ ವರದಿಯ ಆಧಾರದಲ್ಲಿ ದ.ಕ.ಜಿಲ್ಲಾಧಿಕಾರಿ ಗಡಿಪಾರಿಗೆ ಆದೇಶ ನೀಡಿದ್ದಾರೆ.


ನಾನು ಬಿಜೆಪಿ ಬೆಂಬಲಿಗ !
ಗಡಿಪಾರಿಗೆ ಒಳಗಾದ ಪ್ರಜ್ವಲ್ ರೈ ಅವರು ನನಗೆ ಗಡಿಪಾರಿಗೆ ಆದೇಶ ಆಗಿದೆ. ನಾನು ಕಾನೂನಿಗೆ ಗೌರವ ನೀಡಿ ಹೊರಗಿದ್ದೇನೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನಾನು ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗ ಎಂದು ಬರುತ್ತಿದೆ. ಆದರೆ ನಾನು ಯಾವತ್ತಿದ್ದರೂ ಬಿಜೆಪಿಗೆ ಬೆಂಬಲಿಸುವುದು. ಸುಳ್ಳು ಮಾಹಿತಿಯನ್ನು ನಂಬಬೇಡಿ ಎಂದು ಅವರು ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here