ಪುತ್ತೂರು ಸಮುದಾಯ ಭವನದ ಮತಗಟ್ಟೆ ಬಳಿ ಬಿಜೆಪಿ v/s ಪುತ್ತಿಲ ಟೀಮ್ ನಡುವೆ ಆರೋಪ- ಸಂಬಂಧಿಕರಲ್ಲೇ ಮಾತಿನ ಚಕಮಕಿ

0


ಪುತ್ತೂರು: ಪುತ್ತೂರು ಕಸಬದ ಸಮುದಾಯಭವನದಲ್ಲಿ ಮತಗಟ್ಟೆಯ ಬಳಿ ಸಂಬಂಧಿಕರಿಬ್ಬರ ನಡುವೆ ಮಾತಿನ ಚಕಮಕಿ ನಡೆದ ಮತ್ತು ಮಿತಿಮೀರಿದಾಗ ಅದು ಬಿಜೆಪಿ v/s ಪುತ್ತಿಲ ತಂಡದ ನಡುವೆ ತಿರುಗಿದ್ದು, ಕೊನೆಗೆ ಸ್ಥಳಕ್ಕೆ ಪೊಲೀಸರು ಬಂದು ಅಲ್ಲಿ ಜಮಾಯಿಸಿದ ಎರಡೂ ಕಡೆಯವರನ್ನು ಕಳುಹಿಸಿದ ಘಟನೆ ನಡೆದಿದೆ.
ಪುತ್ತೂರು ಸಮುದಾಯ ಭವನದಲ್ಲಿನ ಮತಗಟ್ಟೆಯ ಬಳಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿತ ಪ್ರವೀಣ್ ನಾಯಕ್ ಎಂಬವರು ಬಂದಿದ್ದರು. ಇದೇ ವೇಳೆ ಕಾಸರಗೋಡು ಮೂಲದ ಪ್ರತಾಪ್ ನಾಯಕ್ ಎಂಬವರು ಅವರ ತೆಂಕಿದಲ್ಲಿರುವ ಸಂಬಂಧಿಕರ ಮನೆಯಿಂದ ಸಮುದಾಯ ಭವನದ ದಾರಿಯಾಗಿ ಬರುತ್ತಿದ್ದರೆನ್ನಲಾಗಿದೆ. ಪ್ರವೀಣ್ ನಾಯಕ್ ಅವರು ಕಾಸರಗೋಡಿನವರು ಇಲ್ಲೇನು ಕೆಲಸ ಎಂದು ಸಂಬಂಧಿಕ ಪ್ರತಾಪ್ ನಲ್ಲಿ ವಿಚಾರಿಸಿದಾಗ ಪ್ರತಾಪ್ ಅವರು ಕೆಮ್ಮಾಯಿಯ ಮತದಾರ ಇಲ್ಲೇನು ಎಂದು ಪ್ರಶ್ನಿಸಿದರು. ಈ ನಡುವೆ ಅವರಿಬ್ಬರಲ್ಲೂ ಮಾತಿನ ಚಕಮಕಿ ನಡೆಯಿತು. ಇದರೊಂದಿಗೆ ಪ್ರತಾಪ್ ಸ್ನೇಹಿತ ಕಾಸರಗೋಡಿನ ರಮೇಶ್ ಅವರು ಕೂಡಾ ಮಾತಿಗೆ ಮಾತು ಬೆಳೆಸಿದರು. ಆಗ ಅಲ್ಲೇ ಇದ್ದ ಬಿಜೆಪಿ ಮತ್ತು ಪುತ್ತಿಲ ಕಾರ್ಯಕರ್ತರೂ ಸೇರಿದರು. ಮಾತಿಗೆ ಮಾತು ಬೆಳೆದು ಹೊಯಿಕೈಯಿ ನಡೆಯಿತು‌. ಸ್ಥಳಕ್ಕೆ ಪೊಲೀಸ್ ಆಗಮಿಸಿ ಎಲ್ಲರನ್ನು ಚದುರಿಸಿದರು.

LEAVE A REPLY

Please enter your comment!
Please enter your name here