ಗ್ರಾಮೀಣ ಪರಿಸರದಲ್ಲಿ ಸಂಸ್ಕಾರಯುತ ಪದವಿ ಪೂರ್ವ ಶಿಕ್ಷಣ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು

0

ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ವಿಶಿಷ್ಟತೆಯನ್ನು ಹೊಂದಿರುವ ರಾಮಕುಂಜವು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಒಂದು ಗ್ರಾಮ. ವಿಶ್ವಮಾನ್ಯರಾಗಿರುವ ಶ್ರೇಷ್ಠ ಸಂತ ಶ್ರೀ ವಿಶ್ವೇಶತೀರ್ಥರ ಹುಟ್ಟೂರು.

ಇಲ್ಲಿ 1991ರಿಂದಲೇ ಶೈಕ್ಷಣಿಕ ಸೇವೆ ಆರಂಭಿಸಿರುವ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾವು ಪ್ರಸ್ತುತ ಶ್ರೀ ವಿಶ್ವಪ್ರಸನ್ನ ತೀರ್ಥರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಿದ್ಯಾವರ್ಧಕ ಸಭಾದ ಅಧೀನತೆಯಲ್ಲಿರುವ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಇದೆ. 1952ರಲ್ಲಿ ಓರಿಯೆಂಟಲ್ ಹೈಸ್ಕೂಲ್ ಎನ್ನುವ ಹೆಸರಿನೊಂದಿಗೆ ಆರಂಭವಾದ ಪ್ರೌಢಶಾಲೆಯು 1984ರಲ್ಲಿ ಪದವಿ ಪೂರ್ವ ಕಾಲೇಜು ಆಗಿ ಉನ್ನತೀಕರಣಗೊಂಡಿತು.

ಸಕಲ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ, ತಾಲೂಕಿನಲ್ಲಿಯೇ ವಿಶಾಲವಾದ ಕ್ರೀಡಾಂಗಣ, ಸಭಾಂಗಣ, ಅನುಭವೀ ಶಿಕ್ಷಕ ವೃಂದ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಶಾಲಾ ಬಸ್ಸಿನ ವ್ಯವಸ್ಥೆ, ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ತರಬೇತಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ನೈತಿಕ ಶಿಕ್ಷಣ, ಯೋಗಭ್ಯಾಸ, ರಾಷ್ಟ್ರೀಯ ಸೇವಾ ಯೋಜನೆ, ಸುಸಜ್ಜಿತ ಪ್ರಯೋಗಾಲಯಗಳು, ಹೊರಾಂಗಣದಲ್ಲಿ ವಿಜ್ಞಾನ ಪಾರ್ಕ್, ನಿರಂತರ ಕ್ರೀಡಾ ತರಬೇತಿ ಇತ್ಯಾದಿ ಪಠ್ಯೇತರ ಚಟುವಟಿಕೆಗಳಿಂದಾಗಿ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಯಶಸ್ವಿ ಉದ್ಯೋಗಸ್ಥರಾಗಿ, ಉದ್ಯಮಿಗಳಾಗಿ, ಯಶಸ್ವಿ ಕೃಷಿಕರಾಗಿ ರೂಪಿಸಿಕೊಂಡಿದ್ದಾರೆ.

ನಗರದ ಯಾವುದೇ ಜಂಜಾಟಗಳು, ಅನಪೇಕ್ಷಿತ ಆಕರ್ಷಣೆಗಳು ಇಲ್ಲದೆ ಅತ್ಯಂತ ಪ್ರಶಾಂತ ವಾತಾವರಣಗಳಲ್ಲಿ ರಾಷ್ಟ್ರೀಯತೆ ಮತ್ತು ಸಂಸ್ಕಾರಯುತವಾದ ಶಿಕ್ಷಣ ನೀಡುವ ಅದ್ಬುತ ವಿದ್ಯಾಕೇಂದ್ರವಾಗಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮುನ್ನಡೆಯುತ್ತಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ನಿರಂತರವಾಗಿ ಶೇ.95ಕ್ಕಿಂತ ಹೆಚ್ಚು ಫಲಿತಾಂಶ ಪಡೆಯುತ್ತಿದೆ. ಅತೀ ಕಡಿಮೆ ಶುಲ್ಕದೊಂದಿಗೆ ಮತ್ತು ಅರ್ಹರಿಗೆ ಶುಲ್ಕ ವಿನಾಯಿತಿಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಯ ವಿಶೇಷತೆಯಾಗಿದೆ.

ವಿದ್ಯಾರ್ಥಿ ಕೇಂದ್ರತವಾದ ಶಿಕ್ಷಣ ನಮ್ಮ ಧ್ಯೇಯವಾಗಿದೆ. ಪೋಷಕರೊಂದಿಗೆ ನಿರಂತರವಾದ ಸಂಪರ್ಕ ಇರಿಸಿಕೊಂಡು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ದುಡಿಯುವ ಸಮರ್ಥ ಶಿಕ್ಷಕ ವೃಂದವೂ ಸಂಸ್ಥೆಯ ಏಳಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಳಗ ಇಚ್ಛಾ ಶಕ್ತಿಯಿಂದ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಗ್ರಾಮೀಣ, ಪ್ರಶಾಂತ ವಾತಾವರಣಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಸಂಸ್ಕಾರಯುತ ಶಿಕ್ಷಣ, ಪಠ್ಯದೊಂದಿಗೆ ಪಕ್ಷೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣ ಈ ವಿದ್ಯಾಸಂಸ್ಥೆಗಳ ಉದ್ದೇಶವೂ ಆಗಿದೆ.

ಉತ್ತಮ ಫಲಿತಾಂಶ:
ಕಾಲೇಜಿಗೆ ಪ್ರತಿವರ್ಷವೂ ನಿರಂತರವಾಗಿ 95 ಶೇ.ಕ್ಕಿಂತ ಹೆಚ್ಚು ಫಲಿತಾಂಶ ಬರುತ್ತಿದೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 99 ಶೇ.ಫಲಿತಾಂಶ ಪಡೆದುಕೊಂಡಿದೆ. ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ತೇರ್ಗಡೆ ಫಲಿತಾಂಶ ಲಭಿಸಿದೆ. ಕಲಾ ವಿಭಾಗದಲ್ಲಿ ಶೇ.89 ಫಲಿತಾಂಶ ಬಂದಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲೂ 96 ಶೇ. ಫಲಿತಾಂಶ ಪಡೆದುಕೊಂಡಿದೆ.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧೀನತೆಯಲ್ಲಿರುವ ವಿದ್ಯಾಸಂಸ್ಥೆಗಳು:

  • ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠಶಾಲೆ
  • ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ
  • ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ
  • ಶ್ರೀ ರಾಮಕುಂಜೇಶ್ವರ ಪದವಿ ಪೂರ್ವಕಾಲೇಜು (ಕಲೆ, ವಾಣಿಜ್ಯ, ವಿಜ್ಞಾನ ವಿಭಾಗ)
  • ಶ್ರೀ ರಾಮಕುಂಜೇಶ್ವರ ಬಾಲಕರ ಹಾಸ್ಟೆಲ್
  • ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ (ಆಂಗ್ಲಮಾಧ್ಯಮ)
  • ಶ್ರೀ ರಾಮಕುಂಜೇಶ್ವರ ಪ್ರಾಥಮಿಕ ಶಾಲೆ (ಆಂಗ್ಲಮಾಧ್ಯಮ)
  • ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್
  • ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜು

ಪಿಯುಸಿ ವಿಭಾಗದಲ್ಲಿರುವ ಶೈಕ್ಷಣಿಕ ಸಂಯೋಜನೆಗಳು:
ವಿಜ್ಞಾನ ವಿಭಾಗ:

  • ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರ(ಪಿಸಿಎಂಬಿ)
  • ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣತಶಾಸ್ತ್ರ, ಗಣಕವಿಜ್ಞಾನ(ಪಿಸಿಎಂಸಿ)
  • ವಾಣಿಜ್ಯ ವಿಭಾಗ:
  • ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ(ಎಸ್‌ಇಬಿಎ)
  • ಗಣಕ ವಿಜ್ಞಾನ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ(ಸಿಇಬಿಎ)
  • ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ (ಹೆಚ್‌ಇಬಿಎ)

  • ಕಲಾವಿಭಾಗ:
    ಇತಿಹಾಸ, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ (ಹೆಚ್‌ಇಪಿಎಸ್)
    ಭಾಷೆಗಳು: ಇಂಗ್ಲಿಷ್, ಕನ್ನಡ/ಹಿಂದಿ/ಸಂಸ್ಕೃತ

ಪ್ರೌಢಶಾಲಾ ವಿಭಾಗ (ಕನ್ನಡ ಮಾಧ್ಯಮ):
8,9 ಮತ್ತು 10ನೇ ತರಗತಿ- ದಾಖಲಾತಿ ನಡೆಯುತ್ತಿದ್ದು, ಆಸಕ್ತರು ಕಚೇರಿ (8861495235), ರಾಧಾಕೃಷ್ಣ ಕೆ.ಎಸ್. ಕಾರ್ಯದರ್ಶಿ(9448125133) ಅಥವಾ ಚಂದ್ರಶೇಖರ ಕೆ. ಪ್ರಾಂಶುಪಾಲರು (9449268374) ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here