ಸವಣೂರು ಸ.ಪ.ಪೂ.ಕಾಲೇಜು ಫ್ರೌಢಶಾಲಾ ವಿಭಾಗಕ್ಕೆ ಶೇ.94.73 ಫಲಿತಾಂಶ

0

ಪುತ್ತೂರು: ಸವಣೂರು ಸ.ಪೂ.ಕಾಲೇಜು ಫ್ರೌಢಶಾಲಾ ವಿಭಾಗಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.94.73 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 57 ವಿದ್ಯಾರ್ಥಿಗಳಲ್ಲಿ 54 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಗಾಯನ್ ಆರ್.ಎಸ್( 577) ಬಿ.ಸೌಜನ್ಯ (570) ಸೃಜನ್ ಡಿ.(566) ರಶ್ಮಿತಾ ಎ(555) ಸುಹಾನಿ (533) ಭೂಮಿಕಾ (529) ರಿಶಿತಾ (529) ಹಾಗೂ ಶರಣ್ಯ ಜಿ.ಎಸ್(520)ರವರು 500ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 54 ವಿದ್ಯಾರ್ಥಿಗಳಲ್ಲಿ 5 ಮಂದಿ ಡಿಸ್ಟಿಂಕ್ಷನ್, 39 ಮಂದಿ ಪ್ರಥಮ ಹಾಗೂ 10 ಮಂದಿ ದಿತ್ವೀಯ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೇ.94.73 ಫಲಿತಾಂಶವನ್ನು ಪಡೆದಿದೆ ಎಂದು ಫ್ರೌಢಶಾಲಾ ಮುಖ್ಯಗುರು ರಘು ಬಿ.ಆರ್ ಹಾಗೂ ಸಂಸ್ಥೆಯ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here