ವಿಟ್ಲ: ಪೇಟೆ ಪಟ್ಟಣಗಳು ಬೆಳೆಯುತ್ತಾ ಹೋದಂತೆ ಆಧುನಿಕ ವ್ಯಾಪಾರ ವ್ಯವಹಾರದ ವಿಧಾನಗಳು ಒಂದೊಂದಾಗಿ ಆರಂಭಗೊಳ್ಳುತ್ತಾ ಹೋಗುವುದರಿಂದ ನಗರದ ಅಭಿವೃದ್ಧಿ ತೀವ್ರಗತಿಯ ವೇಗವನ್ನು ಪಡೆಯುತ್ತವೆ. ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯೂ ಇದರಿಂದ ಹೊರತಾಗಿಲ್ಲ. ಭವಿಷ್ಯದಲ್ಲಿ ಶೀಘ್ರದಲ್ಲಿಯೇ ತಾಲೂಕು ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಪಟ್ಟಣಗಳಲ್ಲಿ ಒಂದಾಗಿದೆ. ಈ ಪೇಟೆಯ ಹೃದಯ ಭಾಗದ ವಿಟ್ಲ ಪುತ್ತೂರು ರಸ್ತೆಯ ಬದಿಯಲ್ಲಿ ಬಹು ಮಹಡಿಯ ಸುಂದರ ಶಾಪಿಂಗ್ ಕಾಂಪ್ಲೆಕ್ಸ್ ಒಂದು ತಲೆ ಎತ್ತಿದೆ. ಬಸ್ಸು ನಿಲ್ದಾಣದಿಂದ ಕೇವಲ 100 ಮೀ ಅಂತರದಲ್ಲಿ ಸ್ಮಾರ್ಟ್ ಸಿಟಿ ಶಾಪಿಂಗ್ ಕಾಂಪ್ಲೆಕ್ಸ್ ವೈವಿಧ್ಯಮಯ ವ್ಯಾಪಾರ ವ್ಯವಹಾರ ಸೇವೆಗೆ ಸಜ್ಜಾಗಿದೆ. ಬೇಸ್‌ಮೆಂಟ್, ಗ್ರೌಂಡ್, ಫಸ್ಟ್ ಹಾಗೂ ಸೆಕೆಂಡ್ ಫ್ಲೋರ್ ಗಳಲ್ಲಿ ಮಾಲ್ ವಿಸ್ತಾರಗೊಂಡಿದೆ.
ಸಂಸ್ಥೆಯ ಬಗ್ಗೆ:
ಮಂಗಳೂರಿನ ಹೆಸರಾಂತ ಬಿಲ್ಡರ್ ಗಳಲ್ಲಿ ಒಂದಾದ ಎಸಿಇ ಪ್ರಮೋಟರ್ಸ್ ಡೆವಲಪರ್ಸ್ ನ ನಿರ್ದೇಶಕರಾದ ಜಿತೇಶ್ ಜೈನ್ ಹಾಗೂ ದರ್ಶನ್ ಜೈನ್ ರವರು ಇದರ ರೂವಾರಿಗಳು. ಸಂಸ್ಥೆಯು 2010ರಲ್ಲಿ ಆರಂಭವಾಗಿದ್ದು, ಈಗಾಗಲೇ ಸುಮಾರು 11 ಪ್ರಾಜೆಕ್ಟ್ ಗಳು ಪೂರ್ಣಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಎರಡೂ ಕಡೆ ರಸ್ತೆ ಸಂಪರ್ಕ:
ವಿಟ್ಲ – ಪುತ್ತೂರು ರಸ್ತೆ ಗ್ರೌಂಡ್ ಫ್ಲೋರ್ ಗೆ ಸಂಪರ್ಕ ಕಲ್ಪಿಸಿದರೆ, ಸಂತೆ ಮಾರುಕಟ್ಟೆ ರಸ್ತೆಯು ಪ್ರಥಮ ಮಹಡಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಗ್ರಾಹರಿಗೆ ಹಾಗೂ ಶಾಪ್ ಮಾಲಕರಿಗೆ ಇನ್ನಷ್ಟು ಪ್ರಯೋಜನವಾಗಿದೆ.
ಸೀಮಿತ ಶಾಪ್ ಲಭ್ಯ:
ಈಗಾಗಲೇ ಹೆಸರಾಂತ ಮಲ್ಟಿ ನ್ಯಾಶನಲ್ ಕಂಪನಿಗಳು ಈ ಕಾಂಪ್ಲೆಕ್ಸ್ ನಲ್ಲಿ ತಮ್ಮ ಸಂಸ್ಥೆಯನ್ನು ತೆರೆಯಲಿದೆ. ಎಲ್ಲಾ ಅಂಗಡಿ ಕೋಣೆಗಳು ಮಾರಾಟವಾಗಿ ಹೋಗಿದ್ದು, ಕೊನೇಯ 431 ಸ್ಕ್ವೇರ್ ಫೀಟ್ ನ ಒಂದು ಅಂಗಡಿ ಕೋಣೆ ಲಭ್ಯವಿದೆ.
80 ಕಾರ್ ಪಾರ್ಕಿಂಗ್ ವ್ಯವಸ್ಥೆ:
ವಿಟ್ಲ ಪೇಟೆ ಬೆಳಗ್ಗಿನಿಂದ ರಾತ್ರಿ ವರೆಗೆ ವಾಹನದಟ್ಟಣೆಯಿಂದ ಕೂಡಿರುವ ಪಟ್ಟಣವಾಗಿದೆ. ಇಲ್ಲಿನ ಯಾವೊಂದು ಅಂಗಡಿಗೆ ತೆರಳಬೇಕಾದರೂ ಇಲ್ಲಿ ವಾಹನ ಸವಾರರಿಗೆ ಪಾರ್ಕಿಂಗ್ ಸಮಸ್ಯೆ ಸದಾ ತಲೆನೋವಾಗಿ ಪರಿಣಮಿಸಿದೆ. ಆದರೆ ಈ ಕಾಂಪ್ಲೆಕ್ಸ್ ಈ ನಿಟ್ಟಿನಲ್ಲಿ ವಿಸ್ತತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಯೇ ನಿರ್ಮಿಸಲಾಗಿದೆ. ಏಕಕಾಲದಲ್ಲಿ 80 ರಷ್ಟು ಕಾರ್‌ಗಳನ್ನು ಪಾರ್ಕ್ ಮಾಡಬಹುದಾಗಿದೆ.
24 ಗಂಟೆ ಜನರೇಟರ್, ಲಿಫ್ಟ್ ವ್ಯವಸ್ಥೆ:
ನಿರಂತರ ವಿದ್ಯುತ್ ಸಂಪರ್ಕ ಇರುವುದು ಗ್ರಾಹಕರಿಗೆ ಮತ್ತಷ್ಟು ಖುಷಿ ನೀಡಲಿದೆ. 24 ಗಂಟೆ ಸಮಯ ವಿದ್ಯುತ್ ಜನರೇಟರ್ ವ್ಯವಸ್ಥೆ, ಹತ್ತಿ ಇಳಿಯಲು ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾರೀ ಬೇಡಿಕೆ:
ಸಂಸ್ಥೆಯ ಶಾಪಿಂಗ್ ಕಾಂಪ್ಲೆಕ್ಸ್‌ಗೆ ವ್ಯಾಪಕ ಬೇಡಿಕೆ ಇದೆ. ಬೆಳೆಯುತ್ತಿರುವ ಪಟ್ಟಣಗಳಲ್ಲೊಂದಾದ ವಿಟ್ಲ ಪೇಟೆಯಲ್ಲಿ ಸಕಲ ವ್ಯವಸ್ಥೆಗಳನ್ನು ಹೊಂದಿರುವ ಶಾಪಿಂಗ್ ಮಹಲ್ ನಿರ್ಮಾಣಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಆದ್ದರಿಂದ ಆರಂಭದ ದಿನಗಳಿಂದಲೇ ಈ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಶಾಪ್ ಕೊಂಡುಕೊಳ್ಳಲು ಜನ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬ್ಯಾಂಕ್, ಇನ್ಶ್ಯೂರೆನ್ಸ್ ಕಂಪೆನಿ, ಸೂಪರ್ ಮಾರ್ಕೇಟ್, ಚಿನ್ನಾಭರಣದ ಅಂಗಡಿ, ಹೊಟೇಲ್, ಎಟಿಎಂ, ಎಲೆಕ್ಟ್ರಾನಿಕ್ ಅಂಗಡಿಗಳಿಂದ ವ್ಯಾಪಕ ಬೇಡಿಕೆ ಬಂದಿದ್ದು, ಅಂಗಡಿ ಕೋಣೆಗಳನ್ನು ಕೊಂಡುಕೊಂಡಿದ್ದಾರೆ. ಕಾಂಪ್ಲೆಕ್ಸ್ ನ 90% ಕೆಲಸ ಪೂರ್ಣಗೊಂಡಿದ್ದು, ಉಳಿದಂತೆ ಈ ತಿಂಗಳ ಅಂತ್ಯದ ಒಳಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಹೆಸರೇ ಸೂಚಿಸುವಂತೆ ವಿಟ್ಲ ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆ ಹೊಂದುವಲ್ಲಿ ಸ್ಮಾರ್ಟ್ ಸಿಟಿ ಶಾಪಿಂಗ್ ಸೆಂಟರ್ ಅಮೋಘ ಕೊಡುಗೆ ನೀಡಲಿದೆ ಎಂದು ಹೇಳಬಹುದಾಗಿದೆ.
ಸೆಂಟರ್‌ನ ವಿಶೇಷತೆಗಳು:
@80 ಕಾರ್ ಪಾರ್ಕಿಂಗ್ ವ್ಯವಸ್ಥೆ
@24 ಗಂಟೆ ವಿದ್ಯುತ್ , ಲಿಫ್ಟ್ ವ್ಯವಸ್ಥೆ
@ವಿಟ್ಲ ಬಸ್ ನಿಲ್ದಾಣಕ್ಕೆ ಅತೀ ಸಾಮಿಪ್ಯದಲ್ಲಿರುವ ಸೆಂಟರ್
ಹೆಚ್ಚಿನ ಮಾಹಿತಿಗಾಗಿ:
ದರ್ಶನ್ ಜೈನ್ ರವರು ಮೊಬೈಲ್ ಸಂಖ್ಯೆ 9620380777 ಯನ್ನು ಸಂಪರ್ಕಿಸಬಹುದಾಗಿದೆ.