ರಘುನಾಥಯ್ಯ, ಶಾರದಾರವರ ವೈವಾಹಿಕ ಜೀವನದ ಸುವರ್ಣ ಸಂಭ್ರಮ ; ಪೂಜಾ ಕಾರ‍್ಯಕ್ರಮ-ಯಕ್ಷಗಾನ ರಸದೌತಣ

0

ಪುತ್ತೂರು: ಪಡೀಲು ನಿವಾಸಿ ರಘುನಾಥಯ್ಯ ಮತ್ತು ಶಾರದಾರವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮ ಆಚರಣೆಯು ಮೇ 11 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಜರಗಿತು. ಬೆಳಿಗ್ಗೆ ರಘುನಾಥಯ್ಯ ಟಿ ಅವರಿಗೆ ಸಹಸ್ರ ಚಂದ್ರದರ್ಶನ ಶಾಂತಿ ಹೋಮ ಹಾಗೆಯೇ ಶಾರದಾ ಮತ್ತು ರಘುನಾಥಯ್ಯ ಟಿ ರವರ ವೈವಾಹಿಕ ಜೀವನದ ಸುವರ್ಣ ಸಂಭ್ರಮ ಪೂಜಾ ಕಾರ‍್ಯಕ್ರಮ ನಡೆಯಿತು. ಸಂಜೆ 6.15 ರಿಂದ ರಾತ್ರಿ 12ರತನಕ ಯಕ್ಷಗಾನ ಬಯಲಾಟದ ರಸದೌತಣವನ್ನು ಯಕ್ಷಪ್ರಿಯರಿಗೆ ನೀಡುವ ಮೂಲಕ ವಿಶಿಷ್ಠವಾದ ಕಾರ‍್ಯಕ್ರಮವನ್ನು ಆಯೋಜಿಸಿಲಾಯಿತು. ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಚತುರ್ಜನ್ಮ ಮೋಕ್ಷ ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಇದೇ ವೇಳೆ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ರಘುನಾಥಯ್ಯ, ಶಾರದಾ, ರವೀಂದ್ರ ಟಿ, ಶಶಿಧರ್ ಕಾರಂತ್ ಟಿ, ಮಹಾಲಕ್ಷ್ಮೀ, ಸೌಮ್ಯಶ್ರೀರವರುಗಳು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here