ಎಂ.ಪಿ.ಓಟ್‌ನತ್ತ ಪುತ್ತಿಲ ಅಭಿಮಾನಿಗಳ ಚಿತ್ತ

0

ಪುತ್ತೂರು:ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸೋಲುಂಡಿದ್ದಾರೆ.ಆದರೆ ದಾಖಲೆ ಸಂಖ್ಯೆಯ ಮತಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕಣಕ್ಕಿಳಿಸಲು ಅಭಿಮಾನಿಗಳು ತೀರ್ಮಾನಿಸಿದಂತೆ ಕಾಣುತ್ತಿದೆ.

ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರ ಹೆಸರಿನಲ್ಲಿ ‘ಡಿ.ಕೆ.2024 ಎಂ.ಪಿ ಅರುಣಣ್ಣ-2’ ಎಂಬ ವಾಟ್ಸಪ್ ಗ್ರೂಪ್ ರಚನೆಯಾಗಿದೆ.ಈಗಾಗಲೇ ಹಲವು ಕಾರ್ಯಕರ್ತರು ಈ ಗ್ರೂಪ್ ಜಾಯಿನ್ ಆಗಿದ್ದಾರೆ.ಇದು ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭಾ ಚುನಾವಣೆ ಸ್ಪರ್ಧಿಸುವ ಮುನ್ಸೂಚನೆಯನ್ನು ತೋರಿಸುತ್ತಿದೆ.

LEAVE A REPLY

Please enter your comment!
Please enter your name here