ಭದ್ರ ದೀಪ ಒದಗಿಸಿದ್ದ ಅಶೋಕ್ ರೈಯವರಿಗೆ ದೇವರಿಂದ ಭದ್ರತೆ-ಕೆದಿಲಾಯ
ಪುತ್ತೂರು:ನೂತನ ಶಾಸಕರಾಗಿ ಚುನಾಯಿತರಾದ ಬಳಿಕ ಅಶೋಕ್ ಕುಮಾರ್ ರೈ ಅವರು ವಿಜಯೋತ್ಸವದ ನಡುವೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು ಮತ್ತು ತಿಂಗಳೊಳಗೆ ಶತರುದ್ರ ಸೇವೆ ಸಂಕಲ್ಪ ಮಾಡಿಕೊಂಡರು.
ಸಂಜೆ ಕಬಕದಿಂದ ವಿಜಯೋತ್ಸವದ ಮೂಲಕ ಆಗಮಿಸಿದ ಅವರು ನೇರ ಎಪಿಎಂಸಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ತೆರಳಿ ಅಲ್ಲಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಹಾರಾರ್ಪಣೆ ಮಾಡಿ ಅವರನ್ನು ಬರಮಾಡಿಕೊಂಡರು.ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿದರು.ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು.ಭಕ್ತಿ ಶ್ರದ್ಧೆಯಿಂದ ಕೆಲವು ದಿನಗಳ ಹಿಂದೆಯಷ್ಟೆ ದೇವರಿಗೆ ಭದ್ರದೀಪ ಸಮರ್ಪಣೆ ಮಾಡಿದ್ದ ಅಶೋಕ್ ರೈ ಅವರಿಗೆ ಭದ್ರತೆಯನ್ನು ದೇವರು ನೀಡಿದ್ದಾರೆ.ಮುಂದಿನ ದಿನ ಕ್ಷೇತ್ರದಲ್ಲೂ ಅವರಿಂದ ಉತ್ತಮ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿದ ಅವರು ಮುಂದೆ ತಿಂಗಳೊಳಗೆ ಶತರುದ್ರ ಸೇವೆ ಮಾಡಿಸುವ ಕುರಿತು ಸಂಕಲ್ಪ ಮಾಡಿದರು.ಇದೇ ಸಂದರ್ಭದಲ್ಲಿ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಶಲ್ಯ ಹಾಕಿ ಗೌರವಿಸಿದರು.ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಅವರು ಹಾರಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾಅಶೋಕ್ ರೈ, ಪುತ್ರ ಪ್ರದಿಲ್ ರೈ, ಸಹೋದರಿ ನಳಿನಿ ಪಿ ಶೆಟ್ಟಿ, ಅಳಿಯ ನಿಹಾಲ್ ಪಿ ಶೆಟ್ಟಿ, ಸಹೋದರರಾದ ಸುಬ್ರಹ್ಮಣ್ಯ ರೈ, ರಾಜಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಹೇಮನಾಥ್ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ನಿರ್ಮಲ್ ಕುಮಾರ್ ಜೈನ್, ಶ್ರೀರಾಮ ಪಕ್ಕಳ, ಪ್ರಮೋದ್ ಕುಮಾರ್ ರೈ, ವಿಜಯ ಕುಮಾರ್ ಸೊರಕೆ, ಯೋಗೀಶ್ ಸಾಮಾನಿ, ಮಹಾಬಲ ರೈ ವಳತ್ತಡ್ಕ, ಜೋಕಿಂ ಡಿ ಸೋಜ, ಇಸಾಕ್ ಸಾಲ್ಮರ,ಸೀತಾರಾಮ ಕೊಡ್ನೀರು, ವೇದನಾಥ ಸುವರ್ಣ, ಶಿವರಾಮ್ ಆಳ್ವ, ಶ್ರೀಪ್ರಸಾದ್ ಪಾಣಾಜೆ, ಮೋನಪ್ಪ ಪೂಜಾರಿ, ಮಹೇಶ್ ರೈ ಅಂಕೊತ್ತಿಮಾರ್, ಉದ್ಯಮಿ ಸುದೇಶ್ ಶೆಟ್ಟಿ ಶಾಂತಿನಗರ, ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಲ್ಯಾನ್ಸಿ ಮಸ್ಕರೇನ್ಹಸ್, ರಮೇಶ್ ರೈ ಡಿಂಬ್ರಿ, ಎಂ.ಆರ್.ಜಯಕುಮಾರ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ನಯನಾ ರೈ ನೆಲ್ಲಿಕಟ್ಟೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಚರ್ಚ್, ಮಸೀದಿಗೂ ಭೇಟಿ – ಪ್ರಾರ್ಥನೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅಶೋಕ್ ಕುಮಾರ್ ರೈ ಅವರು ಮಾಯಿದೆ ದೇವುಸ್ ಚರ್ಚ್ ಮತ್ತು ಕೇಂದ್ರ ಜುಮಾ ಮಸೀದಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಪುತ್ತೂರಿನ ನೂತನ ಶಾಸಕರಾದ ಅಶೋಕ್ ಕುಮಾರ್ ರೈಯವರು ತಮ್ಮ ಹುಟ್ಟೂರಾದ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಶೋಕ್ ರೈ ಅವರು ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.