





ಪುತ್ತೂರು: ರಸ್ತೆ ಬದಿಯಲ್ಲಿರುವ ನಾಗಬಣದ ಬಳಿ ಶೌಚ್ಯ ಮಾಡಬೇಡಿ ಎಂದಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದ ಅಪರಿಚತರ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮೇ 9 ರಂದು ನಡೆದಿದ್ದು, ಘಟನೆಯಿಂದ ನೊಂದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.


ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೋಳ್ಯ ರಸ್ತೆ ಸಮೀಪದ ನಿವಾಸಿ ಹರಿಪ್ರಸಾದ್ ಭಟ್ ಅವರು ಹಲ್ಲೆಗೊಳಗಾದವರು. ಮೇ 10 ರಂದು ರಾತ್ರಿ ಕಾರಿನಲ್ಲಿ ಬಂದ ಅಪರಿಚಿತರು ಪೋಳ್ಯ ರಸ್ತೆ ಬದಿಯ ನಾಗ ಬಣದ ಎದುರು ಶೌಚ್ಯ ಮಾಡುತ್ತಿರುವುದನ್ನು ಹರಿಪ್ರಸಾದ್ ಭಟ್ ಅವರು ಪ್ರಶ್ನಸಿದ್ದಕ್ಕೆ ಅಪರಿಚಿತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಹರಿಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.













