ಪುತ್ತೂರು: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಪುಳಿತ್ತಡಿ ಸಮೀಪವಿರುವ ರತ್ನ ಸಂಕೀರ್ಣದಲ್ಲಿ ಗಂಗಾಧರ್ ಹಿರಿಂಜ ಹಳೇನೆರೆಂಕಿ ಹಾಗೂ ವಸಂತ್ ಉಪ್ಪಿನಂಗಡಿ ಇವರ ಪಾಲುದಾರಿಕೆಯಲ್ಲಿ ವರುಷದ ಹಿಂದೆ ಆರಂಭಗೊಂಡಿರುವ, ಮಾರುತಿ ಕಾರುಗಳ ಎಲ್ಲಾ ರೀತಿಯ ಸೇವೆಯನ್ನೊಳಗೊಂಡ ಅಧಿಕೃತ ಸೇವಾ ಸಂಸ್ಥೆ ನ್ಯೂ ರತ್ನ ಮೋಟಾರ್ಸ್ ಇದೀಗ ಗ್ರಾಹಕ ವರ್ಗಕ್ಕೆ ಇನ್ನು ಹೆಚ್ಚು ಸೇವೆ ಒದಗಿಸುವ ಸಲುವಾಗಿ, ವಿಸ್ಕೃತ್ತಗೊಂಡು ಜೊತೆಯಲ್ಲೇ ವಾಯು ಮಾಲಿನ್ಯ ತಪಾಸಣಾ ಕೇಂದ್ರವನ್ನು ಕೂಡ ಮೇ. 17. ರಿಂದ ಆರಂಭಿಸಿದೆ.
ಪಾಲುದಾರ ಗಂಗಾಧರ್ ಹಿರಿಂಜ, ದೀಪ ಪ್ರಜ್ವಲನೆ ಮಾಡುವ ಮೂಲಕ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಉದ್ಘಾಟನೆ ನೆರವೇರಿಸಿದರು. ಇನ್ನೋರ್ವ ಪಾಲುದಾರ ವಸಂತ್ ಉಪ್ಪಿನಂಗಡಿ, ಸಂಸ್ಥೆಯ ಗ್ರಾಹಕರು ಹಾಗೂ ಸಿಬಂದಿಗಳು ಹಾಜರಿದ್ದರು.
ಆ ಬಳಿಕ ಗಂಗಾಧರ್ ಮಾತನಾಡಿ, ಕಾರು ದುರಸ್ಥಿ ಕಾರ್ಯದಲ್ಲಿ ಸುಮಾರು ಇಪ್ಪತ್ತು ವರುಷಗಳ ಅನುಭವದೊಡನೆ, ವಿನೂತನ ಮಾದರಿಯ ಸಲಕರಣೆಗಳು ಹಾಗೂ ಅದ್ಭುತ ಅನುಭವವುಳ್ಳ ತಂಡವನ್ನು ಸಂಸ್ಥೆ ಹೊಂದಿದ್ದು, ನಮ್ಮಲ್ಲಿ ಪೈಂಟಿಂಗ್, ಎ.ಸಿ.ಮೆಕ್ಯಾನಿಕಲ್, ಬಾಡಿ ರಿಪೇರ್, ಫೋಮ್ ವಾಶಿಂಗ್, ಆಕ್ಸಿಡೆಂಟ್ ಕ್ಲೇಮ್, ಇನ್ಸೂರೆನ್ಸ್ ರಿನಿವಲ್, ಟೂ ವೀಲ್ಹರ್ ವಾಷಿಂಗ್ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರ್ ಸೇಲ್ಸ್ ಆಂಡ್ ಪರ್ಚೇಸ್ ಈ ಎಲ್ಲಾ ಸೇವೆಗಳ ಜತೆಗೆ ಇದೀಗ ಎಮಿಷನ್ ಟೆಸ್ಟಿಂಗ್ ಕೂಡ ಆರಂಭಿಸಿದ್ದೇವೆ. ತಮ್ಮೆಲ್ಲರ ಬೆಂಬಲ, ಸಹಕಾರ ಎಂದೆಂದಿಗು ಇರಲಿಯೆಂದು ಹೇಳಿ, ವಂದಿಸಿದರು.