ನೆಹರೂನಗರ ರೈಲ್ವೇ ಮೇಲ್ಸೇತುವೆ ನಿರ್ಮಾಣ : ಬದಲಿ ರಸ್ತೆಯಲ್ಲಿ ಸಂಚರಿಸಲು ಸೂಚನೆ

0

ಪುತ್ತೂರು:ನೆಹರೂನಗರದಲ್ಲಿ ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ರೈಲ್ವೇ ಇಲಾಖೆಯಿಂದ ನಡೆಯಲಿದೆ.ಈ ನಿಟ್ಟಿನಲ್ಲಿ ಮೇ 18ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

ಪುತ್ತೂರು-ಮಂಗಳೂರು ಹೆದ್ದಾರಿಯಿಂದ ವಿವೇಕಾನಂದ ಕಾಲೇಜು ರಸ್ತೆ ಸಂಪರ್ಕಿಸಲು ಬದಲಿ ರಸ್ತೆಯಾಗಿ ಮುರ ಎಂಬಲ್ಲಿಂದ ಕೆದಿಲಕ್ಕೆ ಹೋಗುವ ರಸ್ತೆಯಲ್ಲಿ ಸಂಚರಿಸಿ, ಶಾಂತಿನಗರವಾಗಿ ಅಜೇಯನಗರ ಮುಖಾಂತರ ಕಾಲೇಜು ಕಡೆಗೆ ಹೋಗುವ ರಸ್ತೆಯನ್ನು ಹಾಗೂ ಬನ್ನೂರು ಮಾರ್ಗವಾಗಿ ಪಡೀಲ್ ಕಡೆಗೆ ಸಂಪರ್ಕಿಸಬೇಕು ಎಂದು ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here