ಸತ್ಯಸಾಯಿ ಮಂದಿರದಲ್ಲಿ ಉಚಿತ ನೇತ್ರಾ ಚಿಕಿತ್ಸಾ ಶಿಬಿರ

0

ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಎ.ಜೆ. ಆಸ್ಪತ್ರೆ (ನೇತ್ರ ಚಿಕಿತ್ಸಾ ವಿಭಾಗ) ಮಂಗಳೂರು ಇವರ ಸಹಯೋಗದಲ್ಲಿ ಮೇ.21ರಂದು ಪೂ. ಗಂಟೆ 9.30ರಿಂದ ಮದ್ಯಾಹ್ನ 1 ರವರೆಗೆ, ಪುತ್ತೂರು ಶ್ರೀ ಸತ್ಯಸಾಯಿ ಮಂದಿರ ವಠಾರದಲ್ಲಿ ಶಿಬಿರ ಜರಗಲಿದೆ.

ಅವಶ್ಯಕವಿರುವವರಿಗೆ ಲಭ್ಯ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುವುದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಹೋಗುವ ದಿನಾಂಕವನ್ನು ಶಿಬಿರದಲ್ಲಿ ತಿಳಿಸಲಾಗುವುದು. ಶಸ್ತ್ರ ಚಿಕಿತ್ಸೆಗೆ ಹೋಗುವವರು ಆಧಾರ್ ಕಾರ್ಡ್‌ನ ಪ್ರತಿ, ಭಾವ ಚಿತ್ರ ಮತ್ತು ಒಬ್ಬ ಸಹಾಯಕರೊಂದಿಗೆ ಹೋಗುವುದು. ಪೊರೆ ಶಸ್ತ್ರ ಚಿಕಿತ್ಸೆ ಉಚಿತವಾಗಿರುತ್ತದೆ. ಶಿಬಿರಾರ್ಥಿಗಳು ಅದೇ ದಿನ ಪೂರ್ವಾಹ್ನ 8.30ರಿಂದ 11ರ ಒಳಗೆ ಹೆಸರ ನೊಂದಾಯಿಸಬೇಕು. ಮೊದಲು ಬಂದ 200 ಮಂದಿಗೆ ಮಾತ್ರ ಈ ಸೌಲಭ್ಯವಿರುತ್ತದೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here