ಹಿಂದುತ್ವದ ಪರ ಮಾತನಾಡುವವರ ಈ ಕೃತ್ಯ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ-ಚಕ್ರವರ್ತಿ ಸೂಲಿಬೆಲೆ

0

ಪುತ್ತೂರು: ಹಿಂದೂ ಕಾರ್ಯಕರ್ತರು ಬ್ಯಾನರ್ ಹಾಕಿದ್ದರ ವಿರುದ್ಧ ದೂರು ದಾಖಲಾಗಿರುವುದೇ ದುರದೃಷ್ಟಕರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರನ್ನು ಭೇಟಿಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸೂಲಿಬೆಲೆ ರಾಜಕೀಯ ನಾಯಕರನ್ನು ಅವಮಾನಿಸುವ ಕೆಲಸ ಈ ಹಿಂದೆಯೂ ನಡೆದಿದೆ. ಇಂತಹ ಪ್ರಸಂಗಗಳನ್ನು ಎದುರಿಸುವುದನ್ನೇ ಕಲಿಯಬೇಕು. ಅಸಹ್ಯ ಪಡುವ ರೀತಿಯಲ್ಲಿ ದೂರು ದಾಖಲಿಸಿ ಪೊಲೀಸರು ಹೊಡೆದಿರುವುದು ಅಮಾನುಷ ಕೃತ್ಯ. ಹಿಂದುತ್ವದ ಪರ ಮಾತನಾಡುವವರು ಈ ರೀತಿ ಮಾಡಿದ್ದಾರೆ ಎಂಬ ಸಂದೇಶ ಸಮಾಜಕ್ಕೆ ಹೋದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಹೇಳಿದ್ದಾರೆ

ಸೂಲಿಬೆಲೆ ಪೂರ್ತಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here