ನಮ್ಮ ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ:ಮಹಮ್ಮದ್ ಬಡಗನ್ನೂರು

0

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್‌ ಕುಮಾರ್ ರೈಯವರು ಸಮರ್ಥ, ಪ್ರಾಮಾಣಿಕ, ಅಭಿವೃದ್ದಿಪರ ಶಾಸಕರಾಗಿದ್ದು ಪಕ್ಕದ ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು ಹೇಳಿದರು.


ಪುತ್ತೂರಿಗೆ ಆಗಮಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾರವರು ನಿಮಗೆ ಶಾಸಕರಿಲ್ಲದ ಕೊರಗು ಬೇಡ ನಾನೇ ನಿಮ್ಮ ಶಾಸಕರಂತೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹಮ್ಮದ್ ಬಡಗನ್ನೂರು ಬೆಳ್ತಂಗಡಿಯಲ್ಲಿ ನೊಂದವರ ಪರವಾಗಿ, ಅಶಕ್ತರ ಪರವಾಗಿ, ಅನ್ಯಾಯಕ್ಕೊಳಗಾದವರ ಪರವಾಗಿ ನಮ್ಮ ಶಾಸಕರಾದ ಅಶೋಕ್ ರೈ ಕೆಲಸ ಮಾಡಲಿದ್ದು ಅವರಿಗೆ ಅಷ್ಟು ಸಾಮರ್ಥ್ಯ ಇದೆ ಎಂದು ಹೇಳಿದರು.

ಪುತ್ತೂರಿನಲ್ಲಿ ಬಿಜೆಪಿ ಮತ್ತು ಹಿಂದುತ್ವವಾದಿಗಳ ಡೊಂಬರಾಟ ಜೋರಾಗಿಯೇ ನಡೆಯುತ್ತಿದೆ. ಚುನಾವಣೆಗೆ ಮೊದಲು ಆರಂಭಗೊಂಡ ಇವರೊಳಗಿನ ಯುದ್ದ ಚುನಾವಣೆ ಮುಗಿದ ಬಳಿಕ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಿದೆ. ಅವರವರೇ ಹೊಡೆದಾಡಿಕೊಂಡು, ಬೈದಾಡಿಕೊಂಡು ಅದನ್ನು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಇವೆಲ್ಲವನ್ನೂ ಜನ ಹತ್ತಿರದಿಂದ ಗಮನಿಸುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಯೇ ಇಷ್ಟು ದಿನ ಇಲ್ಲಿನ ಜನರನ್ನು ಮಂಗ ಮಾಡುತ್ತಿದ್ದರು ಈಗ ಅದೆಲ್ಲವೂ ಒಂದೊಂದಾಗಿ ಬಯಲಾಗುತ್ತಿದೆ ಎಂದು ಲೇವಡಿ ಮಾಡಿದರು. ಪುತ್ತೂರಿನಿಂದ ಆರಂಭಗೊಂಡ ಇವರ ಈ ಗುಂಪುಗಾರಿಕೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟಕ್ಕೂ ವಿಸ್ತರಣೆ ಪಡೆದುಕೊಳ್ಳಬಹುದು. ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಪಡೆಯುತ್ತಿದ್ದ ಬಿಜೆಪಿಗೆ ಈ ಬಾರಿ ಜನರ ಶಾಪ ತಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಬಡ ಜನರಿಗೆ ನ್ಯಾಯ ಸಿಕ್ಕಿದಂತಾಗಿದೆ. ಸೋಲಿನಿಂದ ದೃತಿಗೆಟ್ಟ ಬಿಜೆಪಿ ಶಾಸಕರು ಪುತ್ತೂರಿಗೆ ಬಂದು ನಾನೇ ನಿಮ್ಮ ಶಾಸಕ ಎಂದು ಹೇಳುತ್ತಿರುವುದು ಅವರ ಹತಾಶ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಜನತೆಗೆ ತೊಂದರೆಯಾದಲ್ಲಿ, ಅನ್ಯಾಯವಾದಲ್ಲಿ ಪುತ್ತೂರು ಶಾಸಕರು ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಬಡಗನ್ನೂರು ಹೇಳಿದರು.

LEAVE A REPLY

Please enter your comment!
Please enter your name here