





ಇಶಾನ್ ಪಿ.ಬಿ ಶತಕ, ಸಕ್ಸಮ್ ಅರ್ಧಶತಕ


ಪುತ್ತೂರು:ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆ.ಎಸ್.ಸಿ.ಎ) ವತಿಯಿಂದ ಮಂಗಳೂರಿನ ನೆಹರು ಕ್ರೀಡಾಂಗಣದಲ್ಲಿ ಮಂಗಳೂರು, ಉಡುಪಿ, ಕೊಡಗು ಒಳಗೊಂಡ ಅಂಡರ್-19 ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡವು ಮಂಗಳೂರಿನ ಜುಗುಲ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 179 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ.






ಮೊದಲು ಬ್ಯಾಟಿಂಗ್ ಮಾಡಿದ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡವು ಐದನೇ ಕ್ರಮಾಂಕದ ಅಲ್ ರೌಂಡ್ ಆಟಗಾರ ಇಶಾನ್ ಪಿ.ಬಿರವರ 71 ಎಸೆತದಲ್ಲಿ ದಾಖಲಾದ ಆಕ್ರಮಣಕಾರಿ ಶತಕ 104 ರನ್(16 ಬೌಂಡರಿ), ಆರನೇ ಕ್ರಮಾಂಕದ ಆಟಗಾರ ಸಕ್ಸಮ್ ರವರ ಅರ್ಧಶತಕ 62 ರನ್(77 ಎಸೆತ, ಐದು ಬೌಂಡರಿ) ನೆರವಿನೊಂದಿಗೆ ತಂಡವು 49.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 291 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಅಲ್ಲದೆ ತಂಡದ ಪರ ಆರಂಭಿಕ ಆಟಗಾರರಾದ ಮಯೂರ್ ರಾವ್ 16 ರನ್(24 ಎಸೆತ), ಮೈಕಲ್ ಶ್ರೇಯಲ್ 26 ರನ್(58 ಎಸೆತ), ವನ್ ಡೌನ್ ಬ್ಯಾಟರ್ ವಿಷ್ಣು ಪ್ರಭು 11 ರನ್(38 ಎಸೆತ), ಆಕಾಶ್ ಸಾಲಿಯಾನ್ 12 ರನ್(12 ಎಸೆತ), ಪ್ರಿನ್ಸ್ ರಿಯಾನ್ 16 ರನ್(17 ಎಸೆತ), ನಿಹಾಲ್ ಜೊನಾಥನ್ 16 ರನ್(29 ಎಸೆತ)ರವರ ನೆರವಿನಿಂದ ತಂಡವು ಉತ್ತಮ ಮೊತ್ತ ಪೇರಿಸಲು ನೆರವಾದರು. ಜುಗುಲ್ ಸ್ಪೋರ್ಟ್ಸ್ ಕ್ಲಬ್ ಪರ ವರ್ಷಿತ್ 4 ವಿಕೆಟ್, ಅಂಶುಲ್ ಸಾಲಿಯಾನ್ 2 ವಿಕೆಟ್ ಪಡೆದರು.
ಬಳಿಕ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಜುಗುಲ್ ಸ್ಪೋರ್ಟ್ಸ್ ಕ್ಲಬ್ ತಂಡವು ಯೂನಿಯನ್ ಕ್ರಿಕೆಟರ್ಸ್ ತಂಡದ ಹರ್ಷಿತ್(4 ವಿಕೆಟ್), ಪ್ರಿನ್ಸ್ ರಿಯಾನ್(2 ವಿಕೆಟ್), ಗ್ಲೆನ್ ಹಾಗೂ ಆಕಾಶ್ ಸಾಲಿಯಾನ್(ತಲಾ ಒಂದು ವಿಕೆಟ್) ರವರ ಕರಾರುವಾಕ್ ಬೌಲಿಂಗ್ ನಿಂದಾಗಿ 30.2 ಓವರ್ ಗಳಲ್ಲಿ ಕೇವಲ 112 ರನ್ ಗಳಿಸಿ ಅಲೌಟಾಗಿ 179 ರನ್ ಗಳಿಂದ ಸೊಲೋಪ್ಪಿಕೊಂಡಿತು. ಜುಗುಲ್ ಸ್ಪೋರ್ಟ್ಸ್ ಕ್ಲಬ್ ಪರ ಆರಂಭಿಕ ಆಟಗಾರರಾದ ಎಸ್.ಎಂ ಮಾಶೂಕ್ 17 ರನ್, ಆರ್ಯ ಪಿ.ಬಿ 23 ರನ್, ಮಧ್ಯಮ ಕ್ರಮಾಂಕದ ನವೀನ್ ವಿ 18 ರನ್ ಗಳಿಸಲು ಶಕ್ತರಾದರು. ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡವು ತನ್ನ ಪ್ರಥಮ ಪಂದ್ಯವನ್ನು ಗೆದ್ದಿದ್ದು, ಎರಡನೇ ಪಂದ್ಯವನ್ನು ಮಳೆಯ ಕಾರಣದಿಂದ ಡ್ರಾ ಆಗಿತ್ತು ಎಂದು ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಕಾರ್ಯದರ್ಶಿ ವಿಶ್ವನಾಥ್ ನಾಯಕ್ ಹಾಗೂ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟಣೊರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









