ಹಿಂದೂ ಮುಖಂಡ ಅಜಿತ್ ರೈಗೆ ಗಾಯಾಳು ಕೊಠಡಿಗೆ ತೆರಳಲು ಅಡ್ಡಿ ಪಡಿಸಿದ ವಿಡಿಯೋ ವೈರಲ್ !

0

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿರುವ ಗಾಯಾಳುಗಳ ಆರೋಗ್ಯ ವಿಚಾರಣೆಗಾಗಿ ಪುತ್ತೂರು ಆಸ್ಪತ್ರೆಗೆ ಆಗಮಿಸಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಬಂದಿರುವ ಹಿಂದು ಮುಖಂಡ ಅಜಿತ್ ರೈ ಹೊಸಮನೆಯವರನ್ನು ಕೆಲ ಹಿಂದು ಕಾರ್ಯಕರ್ತರು ಗಾಯಾಳು ಇರುವ ಕೊಠಡಿಗೆ ಪ್ರವೇಶಕ್ಕೆ ಅಡ್ಡಿ ಪಡಿಸಿದ ಘಟನೆ ಮೇ 19ರಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಸ್ಪತ್ರೆಗೆ ಆಗಮಿಸಿದಾಗ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಗಾಯಾಳು ಇರುವ ಕೊಠಡಿಯೊಳಗೆ ಕರೆದೊಯ್ದರು. ಈ ಸಂದರ್ಭ ಜೊತೆಯಲ್ಲಿ ಅಜಿತ್ ರೈ ಹೊಸಮನೆಯವರು ಕೂಡಾ ಇದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪೊಲೀಸ್ ಭದ್ರತಾ ಸಿಬ್ಬಂದಿ ಅರುಣ್ ಕುಮಾರ್ ಪುತ್ತಿಲ ಜೊತೆ ಗಾಯಳು ಕೊಠಡಿಯೊಳಗೆ ಹೋಗುತ್ತಿದ್ದಂತೆ ಅವರ ಹಿಂಬದಿಯಿಂದ ಬರುತ್ತಿದ್ದ ಅಜಿತ್ ರೈ ಹೊಸಮನೆ ಅವರಿಗೆ ಗಾಯಳು ಕೊಠಡಿಯೊಳಗೆ ಹೋಗಲು ಅಲ್ಲಿರುವ ಕೆಲ ಹಿಂದೂ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ಸಂದರ್ಭ ಅಜಿತ್ ರೈ ಅವರನ್ನು ಕಾರ್ಯಕರ್ತರು ಕೊಠಡಿ ಬಾಗಿಲಿನಿಂದ ಹೊರ ದೂಡಿದರು. ಅತ್ತ ಕಡೆಯಿಂದ ಅಜಿತ್ ರೈ ಒಳಪ್ರವೇಶಿಸಲು ಎಷ್ಟೇ ಪ್ರಯತ್ನಿಸಿದರೂ ಇತ್ತ ಕಡೆಯಿಂದ ಕಾರ್ಯಕರ್ತರು ಅಜಿತ್ ರೈ ಅವರನ್ನು ಹೊರ ದೂಡಿ ಬಾಗಿಲು ಹಾಕಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈಲರ್ ಆಗುತ್ತಿದೆ. ಬಿಜೆಪಿಯಲ್ಲಿ ದುಡಿದ ಕಾರಣಕ್ಕಾಗಿ ಅಜಿತ್ ರೈ ಅವರನ್ನು ಹೊರ ಹಾಕಿ ವೈಯುಕ್ತಿಕವಾಗಿ ಗುರಿ ಮಾಡುವ ಮೂಲಕ ತಮ್ಮ ದ್ವೇಷದ ರಾಜಕೀಯ ಆಟವನ್ನು ಮುಂದುವರೆಸುವ ಜನರಿಗೆ ದೇವರು ಬುದ್ದಿ ಕೊಡಲಿ ಎಂದು ಸಂದೇಶವೂ ರವಾನೆಯಾಗುತ್ತಿದೆ.

LEAVE A REPLY

Please enter your comment!
Please enter your name here