ಪುತ್ತೂರು: ಆಟೋ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರ ಬಾಕಿಯಾಗಿರುವ ಚಿನ್ನ ಮತ್ತು ನಗದು ಇರುವ ಬ್ಯಾಗ್ ಅನ್ನು ವಾರಿಸುದಾರರಿಗೆ ಹಸ್ತಾಂತರಿಸುವ ಮೂಲಕ ಆಟೋ ರಿಕ್ಷಾ ಚಾಲಕ ಆದಂ ಮಾನವೀಯತೆ ಮೆರೆದ ಘಟನೆ ಮೇ 19ರಂದು ನಡೆದಿದೆ.
ಬೆಂಗಳೂರಿನಿಂದ ಪುತ್ತೂರಿಗೆ ರೈಲಿನಲ್ಲಿ ಬಂದು ಕಾಣಿಯೂರಿಗೆ ತೆರಳಿದ ಅಶೋಕ್ ಎಂಬವರು ತನ್ನ ಚಿನ್ನ ಮತ್ತು ನಗದು ಇದ್ದ ಬ್ಯಾಗ್ ಅನ್ನು ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬರುವ ವೇಳೆ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಬಾಕಿಯಾಗಿತ್ತು. ಈ ಕುರಿತು ಅವರು ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಸುರೇಶ್ ಅವರಿಗೆ ಮಾಹಿತಿ ನೀಡಿದರು. ಅವರು ಬಿಎಂಎಸ್ ಮತ್ತು ಸ್ನೇಹಸಂಗಮ ಸದಸ್ಯರೆಲ್ಲರಿಗೂ ಮಾಹಿತಿ ರವಾನಿಸಿದರು. ಇದರಿಂದಾಗಿ ಮಾಹಿತಿ ಪಡೆದು ರಿಕ್ಷಾ ಚಾಲಕ ಆದಂ ಅವರು ನಗದು ಮತ್ತು ಚಿನ್ನ ಇದ್ದ ಬ್ಯಾಗ್ ಅನ್ನು ವಾರಿಸುದಾರರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.