ಪುತ್ತೂರು ಬ್ಯಾನರ್ ಪ್ರಕರಣ-ಬಿಜೆಪಿಯ ದ್ವಿಪಾತ್ರ ಅಭಿನಯ ನಾಟಕ ನಿಲ್ಲಿಸಲಿ-ಎಸ್‌ಡಿಪಿಐ

0

ಪುತ್ತೂರು: ನಳಿನ್ ಕುಮಾರ್ ಕಟೀಲ್ ಮತ್ತು ಡಿವಿ ಸದಾನಂದ ಗೌಡ ರಿಗೆ ವ್ಯಂಗ್ಯ ರೂಪದಲ್ಲಿ ಶ್ರದ್ದಾಂಜಲಿ ಬ್ಯಾನರ್ ಹಾಕಿದ ಹಿಂದುತ್ವ ಕಾರ್ಯಕರ್ತರನ್ನು ಬಂಧಿಸಿ ಪೋಲಿಸ್ ದೌರ್ಜನ್ಯ ನಡೆಸಲಾಗಿದೆ ಎಂಬ ವಿಚಾರದಲ್ಲಿ ಬಿಜೆಪಿ ನಾಯಕರು ದ್ವಿಪಾತ್ರ ಅಭಿನಯ ನಾಟಕ ನಿಲ್ಲಿಸಲಿ ಎಂದು ಎಸ್‌ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಹೇಳಿದ್ದಾರೆ.


ಪುತ್ತೂರಿನಲ್ಲಿ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ರೀತಿಯಲ್ಲಿದೆ. ಸಂಘಪರಿವಾರದ ನಾಯಕರು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡಿ ಆ ಮೂಲಕ ಜನರನ್ನು ಜಾತಿ ಆಧಾರಿತವಾಗಿ ಪರಸ್ಪರ ಎತ್ತಿ ಕಟ್ಟಿ ಅಧಿಕಾರ ಪಡೆಯುವ ಹುನ್ನಾರದಿಂದ ಅಮಾಯಕ ಹಿಂದು ಯುವಕರ ತಲೆಯಲ್ಲಿ ಜಾತಿ ದ್ವೇಷವನ್ನು ತುಂಬಿ ತಮ್ಮ ಕಾರ್ಯ ಸಾಧಸಲಿಕ್ಕೆ ಅನೇಕ ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ನಾಶದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ಬ್ಯಾನರ್‌ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಹಿಂದೂ ಕಾರ್ಯಕತ್ರರ ವಿರುದ್ದ ಘೋಷಣೆ ಕೂಗಿ ಬಿಜೆಪಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಲ್ಲದೆ, ಬಿಜೆಪಿ ನಾಯಕರೇ ಪೊಲೀಸ್‌ ಇಲಾಖೆಗೂ ಒತ್ತಡ ಹೇರಿದ್ದರು. ನಂತರ ಆರೋಪಿಗಳ ಬಂಧನವಾಗಿ ಡಿವೈಎಸ್‌ ಪಿ ಕಛೇರಿಯಲ್ಲಿ ಆರೋಪಗಳಿಗೆ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಬ್ಯಾನರ್‌ ಹಾಕಿದ್ದು ಬಿಜೆಪಿ ಕಾರ್ಯಕರ್ತರು, ಆರೋಪಿ ದೌರ್ಜನ್ಯ ನಡೆಸಲು ಒತ್ತಡ ಹೇರಿದ್ದು ಬಿಜೆಪಿ ನಾಯಕರೇ ಎಂಬುವುದು ಸ್ವತಃ ಬಿಜೆಪಿ ಕಾರ್ಯಕರ್ತರಿಗೂ ಮತ್ತು ಜಿಲ್ಲೆಯ ಜನತೆಗೂ ತಿಳಿದಿದೆ. ಈ ಪ್ರಕರಣದಲ್ಲಿ ಬಿಜೆಪಿ ದ್ವಿಪಾತ್ರ ಅಭಿನಯ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾಗಿ ಪುತ್ತೂರಿನ ಸಾರ್ವಜನಿಕರು ಇಂತಹ ನಾಟಕಕ್ಕೆ ಬಲಿ ಪಶುವಾಗದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಎಚ್ಚರವಹಿಸ ಬೇಕೆಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here