ನಿಡ್ಪಳ್ಳಿ ದೇವಳಕ್ಕೆ ಪುತ್ತಿಲ ಅಭಿಮಾನಿಗಳಿಂದ ಫ್ಯಾನ್ ಕೊಡುಗೆ

0

ನಿಡ್ಪಳ್ಳಿ; ಚುನಾವಣೆ ಸಂದರ್ಭ ಸಂಗ್ರಹವಾದ ಮೊತ್ತದಲ್ಲಿ ಉಳಿದ ಹಣದಿಂದ ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ಮೂರು ಫ್ಯಾನ್ ಗಳನ್ನು ಮೆ.19 ರಂದು ಕೊಡುಗೆಯಾಗಿ ನೀಡಿದರು.

ನಿಡ್ಪಳ್ಳಿ ಗ್ರಾಮದ ಪುತ್ತಿಲ ಅಭಿಮಾನಿಗಳು ಕಳೆದ ಚುನಾವಣೆಯ ಖರ್ಚಿಗಾಗಿ ಅಭಿಮಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಚುನಾವಣಾ ಖರ್ಚು ಕಳೆದು ಉಳಿದ ಮೊತ್ತದಲ್ಲಿ ಈ ಕೊಡುಗೆಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.ಚುನಾವಣೆಯಲ್ಲಿ ಹಣ ಸಂಗ್ರಹ, ಖರ್ಚು – ವೆಚ್ಚಗಳನ್ನು ಕಾರ್ಯಕರ್ತರೇ ನೋಡಿಕೊಂಡಿದ್ದು ತಾನು ಆ ವಿಷಯದಲ್ಲಿ ತಲೆ ಕೆಡಿಸಿ ಕೊಂಡಿರುವುದಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ  ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here