ಬ್ಯಾನರ್‌ ಪ್ರಕರಣ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ

0

ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವವರನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಡೆದ ಘಟನೆಯ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಅವರು ಈ ರೀತಿ ಅಮಾನುಷ ಕೌರ್ಯ ನಡೆಯಬಾರದಿತ್ತು. ಬ್ರಿಟೀಷ್ ಮಾದರಿಯ ಕೌರ್ಯ. ಇದಕ್ಕೆ ಖಂಡನೆ ಇದೆ. ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಕಾಂಗ್ರೆಸ್ ಮೇಲೆ ಆರೋಪ ಮಾಡಿರುವುದು ನಾನು ಒಪ್ಪುವುದಿಲ್ಲ ಎಂದರು.

ಚಿತ್ತರಂಜನ್ ಶೆಟ್ಟಿ, ಹರೀಶ್ ಅಧಿಕಾರಿ ,ಸಂತೋಷ್ ಪುರೋಹಿತ್, ಅರುಣ್ ಕುಮಾರ್ ಪುತ್ತಿಲ, ಶ್ರೀಕೃಷ್ಣ ಉಪಧ್ಯಾಯ, ಸುಬ್ರಹ್ಮಣ್ಯ ನಟ್ಟೋಜ, ಪ್ರಸಾದ್ ಶೆಟ್ಟಿ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here