ಪಿಕಪ್-ಸ್ಕೂಟರ್ ಡಿಕ್ಕಿ ಇಬ್ಬರಿಗೆ ಗಾಯ

0

ಪುತ್ತೂರು:ಇಲ್ಲಿನ ತೆಂಕಿಲ ಎಂಬಲ್ಲಿ ಪಿಕಪ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮೈಸೂರು ಕಡೆಯಿಂದ ಬರುತ್ತಿದ್ದ ಪಿಕಪ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ. ಸ್ಕೂಟರ್ ಸವಾರ, ಬಂಟ್ವಾಳ ಕಾವಳಪಡೂರು ಭಾಸ್ಕರ ಪೂಜಾರಿಯವರ ಪುತ್ರ ದೀಕ್ಷಿತ್(23ವ.)ಮತ್ತು ಸಹಸವಾರೆ ಶ್ರೀದೇವಿ ಎಂಬವರಿಗೆ ಗಾಯವಾಗಿದೆ. ಶ್ರೀದೇವಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೀಕ್ಷಿತ್ ಅವರನ್ನು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಿಕಪ್ ಚಾಲಕ ಮಹಮ್ಮದ್ ಮಲ್ಲಿಕ್ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here