ಕಡಬದಲ್ಲಿ ನ್ಯೂ ಅಂಬುಲ ಟ್ರೇಡರ್‍ಸ್ ಶುಭಾರಂಭ

0

ಕಡಬ: ಇಲ್ಲಿನ ಶ್ರೀ ರಾಮ ಟವರ್‍ಸ್‌ನಲ್ಲಿ ಡಿಕೆ, ಕಾಳುಮೆಣಸು, ಗೇರುಬೀಜ, ಹಾಗೂ ಕಾಡುತ್ಪತ್ತಿ ಖರೀದಿ ಕೇಂದ್ರ ನ್ಯೂ ಅಂಬುಲ ಟ್ರೇಡರ್‍ಸ್ ಮೇ.20 ರಂದು ಶುಭಾರಂಭಗೊಂಡಿತು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇಲ್ಲಿನ ಧರ್ಮದರ್ಶಿ ಹರೀಶ್ ಅವರು ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವ್ಯವಹಾರದಲ್ಲಿ ಪರೋಪಕಾರ, ಪ್ರಾಮಾಣಿಕತೆ ಇದ್ದಾಗ ಆ ಸಂಸ್ಥೆಯೂ ಅಭಿವೃದ್ದಿಯಾಗಲು ಸಾಧ್ಯ, ಈಗಾಗಲೇ ಕಾಣಿಯೂರು ಮತ್ತು ಆಲಂಕಾರಿನಲ್ಲಿ ಕಾರ್ಯಾಚರಿಸುತ್ತಿರುವ ಅಂಬುಲ ಸಂಸ್ಥೆ ಈಗ ಕಡಬದಲ್ಲಿ ನೂತನ ಸಂಸ್ಥೆಯನ್ನು ಪ್ರಾರಂಬಿಸಿದ್ದಾರೆ, ಈ ಸಂಸ್ಥೆಯು ಜನರಿಗೆ ಉತ್ತಮ ಸೇವೆಯನ್ನು ನೀಡಲಿ ಎಂದು ಹೇಳಿ ಶುಭ ಹಾರೈಸಿದರು.

ಶ್ರೀ ರಾಮ್ ಟವರ್‍ಸ್‌ನ ಮಾಲಕ ಶಿವರಾಮ ಶೆಟ್ಟಿಯವರು ಮಾತನಾಡಿ, ಕಡಬ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಉದ್ಯಮಗಳ ಅವಶ್ಯಕತೆ ಇದೆ. ಇದೀಗ ಪ್ರಾರಂಭವಾಗಿರುವ ನ್ಯೂ ಅಂಬುಲ ಟ್ರೇಡರ್‍ಸ್ ಕೂಡ ಯಶಸ್ವಿ ಉದ್ಯಮವಾಗಲಿದೆ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಪುತ್ತೂರು ಅಂಕಲ್ ಸ್ವೀಟ್ಸ್‌ನ ಮಾಲಕ ಕುಶಾಲಪ್ಪ ಗೌಡ ಕಾರ್ಲಾಡಿ ಉಪಸ್ಥಿತರಿದ್ದರು. ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಗಣೇಶ್ ಉದನಡ್ಕ, ಲಕ್ಷ್ಮಣ ಕರಂದ್ಲಾಜೆ, ಬಾಲಕೃಷ್ಣ ಬಳ್ಳೇರಿ, ಕಡಬ ಉಪ ತಹಸೀಲ್ದಾರ್ ಗೋಪಾಲ್, ಕಡಬ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಸುರೇಶ್ ಬೈಲು, ಪ್ರಮುಖರಾದ ಉದಯ ಸವಣೂರು, ನ್ಯಾಯವಾದಿ ವಿಜೀತ್ ಮಾಚಿಲ, ಪದ್ಮಯ್ಯ ಗೌಡ ಅನಿಲ, ನಾರಾಯಣ ಪೂಜಾರಿ ಪಾಲಪ್ಪೆ, ವಾಸುದೇವ ಕೆರೆಕ್ಕೊಡಿ, ಮೋಹನ್ ಕೋಡಿಂಬಾಳ, ಸುರೇಶ್ ಕಲ್ಲೆಂಬಿ, ಶಾಂತರಾಮ ಶೆಟ್ಟಿ, ರವಿಕುಮಾರ್, ಧರ್ಮರಾಜ್, ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುತ್ತುಕುಮಾರ್, ಧರ್ಮೇಂದ್ರ ಕಟ್ಟತ್ತಾರು, ರವಿರಾಜ ಶೆಟ್ಟಿ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.

ಅಂಬುಲ ಟ್ರೇಡರ್‍ಸ್‌ನ ಮಾಲಕರಾದ ಧರ್ಣಪ್ಪ ಗೌಡ, ಸತೀಶ್ ಅಂಬುಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿವಪ್ರಸಾದ್ ರೈ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here