ರೋಟರಿ ಈಸ್ಟ್ ನಿಂದ ಕುಟುಂಬ ಸಮ್ಮಿಲನ-ಯುವ ಸಮೂಹಕ್ಕೆ ಕ್ರೀಡಾ ಮಾರ್ಗದರ್ಶನ

0

ಪುತ್ತೂರು: ಮಕ್ಕಳು ತನ್ನ ಸಣ್ಣ ಹರೆಯದಲ್ಲಿ ಒಂದೇ ತೆರನಾದ ಆಟಕ್ಕೆ ಜೋತು ಬಿದ್ದರೆ ಪರಿಪೂರ್ಣ ವ್ಯಾಯಾಮ ಸಿಗದು. ದೇಹಕ್ಕೆ ಪರಿಪೂರ್ಣ ವ್ಯಾಯಾಮ ಸಿಗಬೇಕಾದರೆ ಮಕ್ಕಳಿಗೆ ಸಣ್ಣ ಹರೆಯದಲ್ಲಿ ಎಲ್ಲಾ ಆಟವನ್ನು ಆಡುವುದಕ್ಕೆ ಬಿಡಬೇಕು. ಆದರೆ ಅಲ್ಲಿ ಸ್ಪರ್ಧೆ ಇರಬಾರದು ಎಂದು ರಣಜಿ ಕ್ರಿಕೆಟ್ ಮಾಜಿ ಆಟಗಾರ ಹಾಗೂ ತರಬೇತುದಾರ ಶಿವರಾಂ ರೈ ಹೇಳಿದರು.


ಮೇ.22ರಂದು ನವೀಕೃತಗೊಂಡ ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ಯೂತ್ ಸರ್ವಿಸ್ ತಿಂಗಳ ಅಂಗವಾಗಿ ಜರಗಿದ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ಯುವ ಸಮೂಹಕ್ಕೆ ಕ್ರೀಡಾ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕ್ರೀಡೆಯಲ್ಲಿನ ಜ್ಯೂನಿಯರ್ ವಿಭಾಗದಲ್ಲಿ ಕ್ರೀಡಾಪಟುಗಳಿಗೆ ಪ್ರತಿ ಹಂತದಲ್ಲೂ ಹೆಚ್ಚಿನ ತರಬೇತಿಯ ಅಗತ್ಯವಿದೆ, ಆದರೆ ಸೀನಿಯರ್ ವಿಭಾಗದಲ್ಲಿ ಕ್ರೀಡಾಪಟುಗಳು ಬೆಳೆದಿರುತ್ತಾರೆ. ಅವರಿಗೆ ಮಾನಸಿಕ ಬೆಳವಣಿಗೆ ಮುಖ್ಯ. ಕರಾವಳಿ ಭಾಗವು ಭೌಗೋಳಿಕ ಕಂಡೀಶನ್ ಅಷ್ಟೊಂದು ಉತ್ತಮವಾಗಿಲ್ಲ ಮತ್ತು ಇಲ್ಲಿನ ಕ್ರೀಡಾಂಗಣಗಳು ತರಬೇತಿಗೆ ಅಷ್ಟೊಂದು ಸೂಕ್ತವಾಗಿಲ್ಲ. ಇದೇ ಕಾರಣದಿಂದ ಕ್ರೀಡಾಪಟುಗಳು ತನ್ನ ಸಾಧನೆ ಹೆಚ್ಚಿಸಿಕೊಳ್ಳಲು ಬೆಂಗಳೂರಿಗೆ, ಮೈಸೂರಿಗೆ ಹೋಗಬೇಕಾಗುತ್ತದೆ ಎಂದರು.
ಮೇ.20 ರಂದು ತನ್ನ ವೈವಾಹಿಕ ವಾರ್ಷಿಕೋತ್ಸವವನ್ನು ಆಚರಿಸಿದ ಹಾಗೂ ಕುಟುಂಬ ಸಮ್ಮಿಲನದ ಪ್ರಾಯೋಜಕತ್ವವನ್ನು ವಹಿಸಿದ ಕ್ಲಬ್ ಸದಸ್ಯ ಸೂರ್ಯನಾಥ ಆಳ್ವರವರು ಮಾತನಾಡಿ, ತನ್ನದು ಹ್ಯಾಪಿ ಫ್ಯಾಮಿಲಿ, ದೇವರು ಎಲ್ಲವನ್ನು ಅನುಗ್ರಹಿಸಿದ್ದಾನೆ ಎಂದು ಹೇಳಲು ಖುಶಿಯಾಗುತ್ತದೆ. ರೋಟರಿ ಕ್ಲಬ್ ನಲ್ಲಿ ನಾನು 28 ವರ್ಷ ಕಳೆದಿದ್ದೇನೆ ಮತ್ತು ರೋಟರಿಯಿಂದ ನನಗೆ ಬಹಳಷ್ಟು ಸಿಕ್ಕಿದೆ. ಪುತ್ತೂರಿನಲ್ಲಿ ಏಳು ರೋಟರಿ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಅವುಗಳು ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಭಾಗವಹಿಸುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ರೋಟರಿ ಸದಸ್ಯರ ಯಾವುದೇ ಕಾರ್ಯಕ್ರಮಗಳು ರೋಟರಿ ಕುಟುಂಬದೊಂದಿಗೆ ಆಚರಿಸಿದರೆ ಒಳ್ಳೆಯದು ಎಂದ ಅವರು ರೋಟರಿ ಈಸ್ಟ್ ಅಧ್ಯಕ್ಷ ಶರತ್ ರೈಯವರ ಮುತುವರ್ಜಿಯಲ್ಲಿ ಈ ಮನೀಷಾ ಸಭಾಂಗಣ ಮೇಲ್ದರ್ಜೆಗೇರಿರುವುದು ಸಂತೋಷದ ಸಂಗತಿ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ವಲಯ ಸೇನಾನಿ ಪುರಂದರ ರೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಯೋಜಿತ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಸೂರ್ಯನಾಥ ಆಳ್ವ ಪ್ರಾರ್ಥಿಸಿದರು. ರೋಟರಿ ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶಶಿಕಿರಣ್ ರೈ ನೂಜಿ ಸಂಘದ ಚಟುವಟಿಕೆಗಳ ಬಗ್ಗೆ ತಿಳಿಸಿ ವಂದಿಸಿದರು. ಸದಸ್ಯ ರವಿಕುಮಾರ್ ರೈ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸದಸ್ಯರಾದ ಮುರಳೀ ಶ್ಯಾಂ, ಸಚ್ಚಿದಾನಂದ, ಕೆ.ವಿಶ್ವಾಸ್ ಶೆಣೈ, ಚಂದ್ರಶೇಖರ್ ನಡುಬೈಲು, ಪ್ರದೀಪ್ ರಾವ್ ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ರೋಟರಿ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.


ಶಿವರಾಂ ರೈಯವರು ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ರವರ ಬಾಲ್ಯದ ಕೋಚ್ ಆಗಿದ್ದರು..
ಕೋಟೆಕಾರು ದೇರಣ್ಣ ರೈ ಹಾಗೂ ಪದ್ಮಾವತಿ ದಂಪತಿ ಪುತ್ರರಾಗಿರುವ ಮಿಂಜಾ ಮಂಜಲ್ತೋಡಿ ಶಿವರಾಮ ರೈಯವರು ಓರ್ವ ಮಾಜಿ ರಣಜಿ ಆಟಗಾರ ಮತ್ತು ರಣಜಿ ತಂಡದ ಮಾಜಿ ತರಬೇತುದಾರರಾಗಿದ್ದು, ಇವರು ದೆಹಲಿಯ ಅಂಡರ್ 16 ಮತ್ತು ಅಂಡರ್ 25 ಕ್ರಿಕೆಟ್ ತಂಡದ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಭಾರತದ ಪ್ರತಿಷ್ಠಿತ ದೆಹಲಿ ಪಬ್ಲಿಕ್ ಶಾಲೆಯ ಸ್ಪೋರ್ಟ್ಸ್ ಟೀಚರ್ ಆಗಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸಿದವರಾಗಿದ್ದಾರೆ‌. ಭಾರತದ ಏರ್ ಪೋರ್ಸ್ ನಲ್ಲಿ 20 ವರ್ಷ ಸೇವೆ ಸಲ್ಲಿಸಿ ಕೊನೆಗೆ ಸಾರ್ಜಂಟ್ ಆಗಿ ನಿವೃತ್ತಿ ಹೊಂದಿರುತ್ತಾರೆ. ಪ್ರಸ್ತುತ ಶಿವರಾಂ ರೈಯವರು ಉತ್ತರಪ್ರದೇಶದ ಅಲಿಗ್ರಹ ಪವನ ಗ್ರೂಪ್ಸ್ ಇದರ ಪವನ ಕ್ರಿಕೆಟ್ ಅಕಾಡೆಮಿಯ ಕ್ರಿಕೆಟ್ ಹೆಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ವಿಟ್ಲದ ಮಿತ್ತಳಿಕೆ ನಿವಾಸಿಯಾಗಿರುವ ಶಿವರಾಂ ರೈಯವರು ಅಂತರ್ರಾಷ್ಟೀಯ ಕ್ರಿಕೆಟ್ ಆಟಗಾರರಾದ ಗೌತಮ್ ಗಂಭೀರ್, ಅಮಿತ್ ಮಿಶ್ರಾರವರ ಬಾಲ್ಯದ ಕೋಚ್ ಆಗಿರುತ್ತಾರೆ.

ಸನ್ಮಾನ..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರಣಜಿ ಆಟಗಾರ ಹಾಗೂ ತರಬೇತುದಾರರಾಗಿರುವ ಶಿವರಾಮ ರೈ ದಂಪತಿ, ತನ್ನ ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಪ್ರಯುಕ್ತ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿರುವುದು ಅಲ್ಲದೆ ಮೇಲ್ದರ್ಜೆಗೇರಿರುವ ರೋಟರಿ ಮನೀಷಾ ಕಟ್ಟಡಕ್ಕೆ ರೂ.1 ಲಕ್ಷ ದೇಣಿಗೆ ನೀಡಿರುವ ರೋಟರಿ ಈಸ್ಟ್ ಸದಸ್ಯ ಸೂರ್ಯನಾಥ ಆಳ್ವ ಹಾಗೂ ಶಶಿಕಲಾ ಆಳ್ವ ದಂಪತಿಯನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕೇಕ್ ಕತ್ತರಿಸುವಿಕೆ…
ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸದಸ್ಯ ಸೂರ್ಯನಾಥ ಆಳ್ವ ಹಾಗೂ ಶಶಿಕಲಾ ಆಳ್ವ ದಂಪತಿ ಕೇಕ್ ಕತ್ತರಿಸಿ, ಸಿಹಿಯನ್ನು ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಪ್ರಸ್ತುತ ಕೇದಾರ್ ನಲ್ಲಿರುವ ಸೂರ್ಯನಾಥ ಆಳ್ವರವರ ಪುತ್ರಿ ಜ್ಯೋತ್ಸ್ನಾರವರು ತನ್ನ ಹೆತ್ತವರಿಗೆ ಗೊತ್ತಾಗದಂತೆ ಕ್ಲಬ್ ಅಧ್ಯಕ್ಷ ಶರತ್ ಕುಮಾರ್ ರೈಯವರಲ್ಲಿ ಕೇಕ್ ಕತ್ತರಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.

LEAVE A REPLY

Please enter your comment!
Please enter your name here