





ಪುತ್ತೂರು: ದರ್ಬೆಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬರು ಕಂಪ್ಯೂಟರ್‌ವೊಂದನ್ನು ಎತ್ತಿ ಎಸೆದ ಘಟನೆ ಮೇ 22ರಂದು ನಡೆದಿದೆ. ಈ ಘಟನೆ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.


ಗ್ರಾಹಕ ಸೋಗಿನಲ್ಲಿ ರಿಲಯನ್ಸ್ ಡಿಜಿಟಲ್ ಮಳಿಗೆಗೆ ಬಂದ ವ್ಯಕ್ತಿ ಅಲ್ಲಿ ಚಯರ್‌ವೊಂದರ ಮೇಲೆ ಕುಳಿತು ಪೋನ್‌ನಲ್ಲಿ ಮಾತನಾಡುವ ರೀತಿ ಕಾಣುತ್ತಿದ್ದು, ಬಳಿಕ ಒಮ್ಮೆಲೆ ಎದ್ದು ನಿಂತು ತನ್ನ ಎದುರಿದ್ದ ಸಂಸ್ಥೆಯ ಕಂಪ್ಯೂಟರ್‌ನ ಮೋನಿಟರ್ ಅನ್ನು ಎತ್ತಿ ಎಸೆದಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸಂಸ್ಥೆಯ ಪ್ರಮೋದ್ ಪ್ರಭು ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ. ಪೊಲೀಸರು ಇದೊಂದು ಅಸಂಜ್ಞೆಯ ಪ್ರಕರಣವಾಗಿದ್ದು ನ್ಯಾಯಾಲಯದ ಆದೇಶವನ್ನು ಪಡೆಯುವಂತೆ ಹಿಂಬರಹ ನೀಡಿರುವುದಾಗಿ ತಿಳಿದು ಬಂದಿದೆ.














