ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ರೈಂಬೋ ವಿದ್ಯಾರ್ಥಿಗಳ ಬಾಲ ಸಮ್ಮೇಳನ

0

ಪುತ್ತೂರು: ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ರೈಂಬೋ ವಿದ್ಯಾರ್ಥಿಗಳ ಬಾಲ ಸಮ್ಮೇಳನ ಮೈದಾನಿಮೂಲೆ ಸುನ್ನಿ ಸೆಂಟರಿನಲ್ಲಿ ನಡೆಯಿತು. ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ವ್ಯಾಪ್ತಿಯ ಹಲವು ಶಾಖೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಕುಂಬ್ರ ಯುನಿಟ್ ಅಧ್ಯಕ್ಷ ಅಶ್ರಫ್ ಸಖಾಪಿ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷ ರಫೀಖ್ ಬಾಹಸನಿ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಅಧ್ಯಕ್ಷ ರಂಶೀದ್ ಸಖಾಫಿ ವಿದ್ಯಾರ್ಥಿಗಳಿಗೆ ತರಗತಿ ನೀಡಿದರು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಪ್ರ.ಕಾರ್ಯದರ್ಶಿ ಅಬ್ದರ‍್ರಹ್ಮಾನ್ ಸಖಾಫಿ, ಕೋಶಾಧಿಕಾರಿ ರಫೀಕ್ ಪರಾಡ್, ದಅವಾ ಕಾರ್ಯದರ್ಶಿ ರೌಫ್ ಹಾಶಿಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕ್ವಿಝ್, ಆಟ ಮುಂತಾದ ಕಲಾತ್ಮಕ ಕಾರ್ಯಕ್ರಮ ನಡೆಸಲಾಯಿತು. ನೌಫಲ್ ಹಿಮಮಿ ಕಾರ್ಯಕ್ರಮ ಸ್ವಾಗತಿಸಿದರು.

LEAVE A REPLY

Please enter your comment!
Please enter your name here