ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟ್ಸ್ ಸೆಂಟರ್ ನ ವತಿಯಿಂದ ವಿಶ್ವ ಥೈರಾಯಿಡ್ ದಿನದಂಗವಾಗಿ ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರವು ಮೇ 25 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.
ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಫಲಾನುಭವಿಗಳು 9481451929 ನಂಬರಿಗೆ ಕರೆ ಅಥವಾ ವಾಟ್ಸಫ್ ಮಾಡಿ ಹೆಸರನ್ನು ನೊಂದಾಯಿಸಬಹುದು ಎಂದು ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನ ಪ್ರಕಟಣೆ ತಿಳಿಸಿದೆ.