ಶಿರಾಡಿ: ಲಾರಿ, ಟಿಟಿ ನಡುವೆ ಡಿಕ್ಕಿ-ಇಬ್ಬರಿಗೆ ಗಾಯ

0

ಶಿರಾಡಿ: ಲಾರಿ ಹಾಗೂ ಟೆಂಪೋ ಟ್ರಾವೆಲ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಮೇ 23ರ ಮಧ್ಯರಾತ್ರಿ ನಡೆದಿದೆ.


ಮಂಗಳೂರಿನಿಂದ ಬೆಂಗಳೂರಿಗೆ ಪಾರ್ಸೆಲ್ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವೆಲ್ ನಡುವೆ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಟೆಂಪೋ ಟ್ರಾವೆಲ್‌ನಲ್ಲಿದ್ದ ಚಂದ್ರಕಲಾ ಹಾಗೂ ಲಾರಿ ಚಾಲಕ ಮಡಂತ್ಯಾರು ನಿವಾಸಿ ಮಹಮ್ಮದ್ ಮನ್ಸೂರು(40ವ.) ಎಂಬವರು ಗಾಯಗೊಂಡಿದ್ದು ಇಬ್ಬರನ್ನು ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಟೆಂಪೋ ಟ್ರಾವೆಲ್ ಚಾಲಕ ರಂಗಸ್ವಾಮಿಯವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ವಾಹನ ಚಲಾಯಿಸಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಟೆಂಪೋ ಟ್ರಾವೆಲ್ ಚಾಲಕ ರಂಗಸ್ವಾಮಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here