ಐ.ಎ.ಎಸ್ ಪರೀಕ್ಷೆ: ಯೂನಿವರ್ಸಲ್ ಕೋಚಿಂಗಿನ ವಿದ್ಯಾರ್ಥಿನಿಗೆ 2ನೇ ರ್ಯಾಂಕ್ -ಯುಪಿಎಸ್.ಸಿ. ಪರೀಕ್ಷೆ: ಸಂಸ್ಥೆಯ 10 ಅಭ್ಯರ್ಥಿಗಳು ಆಯ್ಕೆ

0

ಪುತ್ತೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈ ಬಾರಿ 10 ಮಂದಿ ಉತ್ತೀರ್ಣರಾಗಿದ್ದಾರೆ.

ಗರೀಮಾ ಲೋಹಿಯಾ 2ನೇ ಸ್ಥಾನ ಪಡೆದಿದ್ದರೆ, ವೈಷ್ಣವಿ ಪೌಲ್ 62ನೇ ಸ್ಥಾನ, ವಿಶ್ವಜೀತ್ ಸೌರ್ಯನ್ 126ನೇ ಸ್ಥಾನ, ಪಿ.ಶ್ರವಣ್ ಕುಮಾರ್ 222ನೇ ಸ್ಥಾನ, ಶಿವಾಂಗ್ ರಸ್ತೋಗಿ 307ನೇ ಸ್ಥಾನ, ಶುಭ್ರತೋಷ್ ಶರ್ಮ 358 ನೇ ಸ್ಥಾನ, ಸ್ವಸ್ಥಿಕಾ ಆರ್.ಪಿ. 456ನೇ ಸ್ಥಾನ, ಪ್ರಣಯ್ ಕುಮಾರ್ ಸಿಂಗ್ 602ನೇ ಸ್ಥಾನ, ಮನ್ ಪ್ರೀತ್ ಸಿಂಗ್ 616ನೇ ಸ್ಥಾನ ಹಾಗೂ ರಾಮ್ ದೇನಿ ಸಾಯಿನಾಥ್ 743ನೇ ಸ್ಥಾನ ಗಳಿಸಿದ್ದಾರೆ.

23 ವರ್ಷಗಳ ಹಿಂದೆ ಬೆಂಗಳೂರಿನ ವಿಜಯನಗರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಾರಂಭವಾದ ಯೂನಿವರ್ಸಲ್ ಕೋಚಿಂಗ್ ಸೆಂಟರ್ ನಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಮಂದಿ ಈಗಾಗಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಈ ಬಾರಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಇದೀಗ ಕೆಂಗೇರಿ ಸಮೀಪದ ರಾಮೋಹಳ್ಳಿಯಲ್ಲೂ ಇಂಟಿಗ್ರೇಟೆಡ್ ಪದವಿ ಶಿಕ್ಷಣ ನೀಡುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here