ಮೇ 27-28: ಅಡ್ಯಾರ್ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ-2023; ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ

0

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಮೇ 27ರಂದು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ, ಮೇ28ರಂದು ಯಕ್ಷಧ್ರುವ ಪಟ್ಲ ಸಂಭ್ರಮ 2023 ಅಡ್ಯಾರ್‌ನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನ್ಯಾನ ಸದಾಶಿವ ಶೆಟ್ಟಿಯವರ ಸಂಭ್ರಮಾಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ ನಡೆಯಲಿದೆ. ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಿಗ್ಗೆ 8ರಿಂದ ಚೌಕಿ ಪೂಜೆ, ಬಳಿಕ ಅಡ್ಯಾರ್ ಕಟ್ಟೆಯಿಂದ ಸಂಭ್ರಮಾಧ್ಯಕ್ಷರೊಂದಿಗೆ ಮೆರವಣಿಗೆ ನಡೆಯಲಿದೆ. 9.30 ಕ್ಕೆ ಪಟ್ಲ ಸಂಭ್ರಮ ಉದ್ಘಾಟನೆ ನೆರವೇರಲಿದೆ. ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ, ಬಾರ್ಕೂರು ಸಂಸ್ಥಾನಂನ ಶ್ರೀವಿಶ್ವಸಂತೋಷ ಭಾರತಿ ಸ್ವಾಮೀಜಿ, ಒಡಿಯೂರು ಶ್ರೀ ಕ್ಷೇತ್ರದ ಶ್ರೀಗುರುದೇವಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕಟೀಲು ಶ್ರೀಲಕ್ಷ್ಮೀನಾರಾಯಣ ಅಸ್ರಣ್ಣ, ಪಾವಂಜೆ ಶ್ರೀಕ್ಷೇತ್ರದ ಧರ್ಮದರ್ಶಿ ಡಾ ಯಾಜಿ ನಿರಂಜನ ಭಟ್ ಆಶೀರ್ವಚನ ನೀಡಲಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಿಎ ದಿವಾಕರ್ ರಾವ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಮತ್ತು ಶಶಿಧರ ಶೆಟ್ಟಿ ಬರೋಡಾ ಇವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ವಿವಿಧ ಸಮಾಜದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ, ರಕ್ತದಾನ ಶಿಬಿರ ಉದ್ಘಾಟನೆ ನೆರವೇರಲಿದೆ.

ಯಕ್ಷಗಾನ ಸಪ್ತಸ್ವರ: ಬೆಳಿಗ್ಗೆ 11 ರಿಂದ ಯಕ್ಷಗಾನ ಸಪ್ತಸ್ವರ- ಪುತ್ತಿಗೆ, ಅಮ್ಮಣ್ಣಾಯ, ರಾಘವೇಂದ್ರ ಮಯ್ಯ, ಬಲಿಪ, ಕನ್ನಡಿಕಟ್ಟೆ, ಜನ್ಸಾಲೆ, ಕಕ್ಕೆಪದವು, ಉಪಾಧ್ಯಾಯ, ಬೊಳಿಂಜಡ್ಕ, ಪದ್ಯಾಣ, ಸುನಿಲ್, ಸುಜನ್, ಹಾಲಾಡಿಯವರ ನೇತೃತ್ವದಲ್ಲಿ ಉಜಿರೆ ಅಶೋಕ್ ಭಟ್ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30ರಿಂದ ಯಕ್ಷಗಾನ ತಾಳಮದ್ದಲೆ ಜರಗಲಿದೆ. ಸಂಜೆ 4ರಿಂದ ಮಹಿಳಾ ಯಕ್ಷಗಾನ ನಡೆಯಲಿದೆ.

ಯಕ್ಷಧ್ರುವ ಪಟ್ಲ ಪ್ರಶಸ್ತಿ: ಪ್ರೊಫೆಸರ್ ಎಮ್ ಎಲ್ ಸಾಮಗ ಅವರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ 2023 ನೀಡಲಾಗುವುದು.

ಗೌರವಾರ್ಪಣೆ: ಟ್ರಸ್ಟ್‌ನ ಸಾಧಕ ಮಹಾಪೋಷಕ ಎಂಅರ್‌ಜಿ ಗ್ರೂಪ್‌ನ ಚೆಯರ್ ಮೆನ್ ಪ್ರಕಾಶ್ ಕೆ. ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಕಲಾಗೌರವ: ಯಕ್ಷಗಾನದಲ್ಲಿ ಕೊಳ್ತಿಗೆ ನಾರಾಯಣ ಗೌಡರ ಸಹಿತ 2023ರ ಯಕ್ಷಧ್ರುವ ಕಲಾ ಗೌರವಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಲಾಗಿದೆ. ವೈದಿಕ – ಕುಡುಪು ನರಸಿಂಹ ತಂತ್ರಿಗಳು, ಮಾಧ್ಯಮ-ಮನೋಹರ್ ಪ್ರಸಾದ್, ಭಾರತೀಯ ಸೇನೆ- ಬ್ರಿಗೇಡಿಯರ್ ಐಎನ್ ರೈ, ಕಲಾ ಸಂಘಟನೆ- ಕಲಾರಂಗ ಉಡುಪಿ ಕನ್ನಡ ಸಂಘ ಬಹೈರೆನ್ (ವಿದೇಶ), ಶಾಸೀಯ ಸಂಗೀತ – ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು, ಹರಿಕಥೆ- ಮಹಾಬಲ ಶೆಟ್ಟಿ, ರಂಗಭೂಮಿ-ಚಲನಚಿತ್ರ- ತಮ್ಮಲಕ್ಷ್ಮಣ,

ಭರತನಾಟ್ಯ : ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್, ಕಂಬಳ – ಭಾಸ್ಕರ ಕೋಟ್ಯಾನ್ ಕೊಳಕೆ ಇರ್ವತ್ತೂರು, ಯಕ್ಷಗಾನ- ಕೊಳ್ತಿಗೆ ನಾರಾಯಣ ಗೌಡ, ಡಿ ಮನೋಹರ್ ಕುಮಾರ್, ಮಹಾಬಲ ದೇವಾಡಿಗ ಕಮಲಶಿಲೆ, ರಘುರಾಮ ಮಡಿವಾಳ ಮಂದಾರ್ತಿ, ಹವ್ಯಾಸಿ – ಶಂಭುಶರ್ಮ ವಿಟ್ಲ, ಶಿವರಾಮ ಪಣಂಬೂರು, ಮಹಿಳೆ- ಲೀಲಾವತಿ ಬೈಪಡಿತ್ತಾಯ, ದೈವಾರಾಧನೆ : ಬಾಚಕೆರೆ ದೇಜಪ್ಪ ಪರವ, ಜಾದೂ: ಕುದ್ರೋಳಿ ಗಣೇಶ್, ಚಿತ್ರಕಲೆ: ದಯಾನಂದ್, ದಯಾ ಆರ್ಟ್ಸ್, ಭಜನೆ: ಶಿವಪ್ಪ ಆಚಾರ್ಯ ಪಟ್ಲ ಮೊದಲಾದವರು ಕಲಾ ಗೌರವ ಪ್ರಶಸ್ತಿ ಪಡೆಯಲಿದ್ದಾರೆ.

ಮರಣೋತ್ತರ ಗೌರವ: ದೈವ ನರ್ತಕ ಕಾಂತು ಅಜಿಲ ಎಡಮೊಗರು, ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರ್ ಮತ್ತು ಜಗದೀಶ ನಲ್ಕ ಕುಟುಂಬಕ್ಕೆ ಮರಣೋತ್ತರ ಗೌರವವಾಗಿ ತಲಾ ಒಂದು ಲಕ್ಷ ರೂಪಾಯಿ ನೀಡಲಾಗುವುದು.

ತಾರಾ ಮೆರುಗು: ಸಮಾರಂಭದಲ್ಲಿ ಕಿಚ್ಚ ಸುದೀಪ್, ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಮತ್ತು ಇನ್ನಿತರ ಕಲಾವಿದರು ಭಾಗವಹಿಸಲಿದ್ದಾರೆ. ರಾತ್ರಿ 8 ರಿಂದ ಕರಾವಳಿಯ ಪ್ರತಿಷ್ಠಿತ ಆಹ್ವಾನ ತಂಡಗಳಿಂದ ಯಕ್ಷಧ್ರುವ ಕಲಾ ವೈಭವ ಅಪೂರ್ವ ಪ್ರತಿಭೆಗಳ ಚಾರಿತ್ರಿಕ ಸ್ಪರ್ಧೆ ನಡೆಯಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಡಾ ಮನು ರಾವ್, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ ಉಪಸ್ಥಿತರಿದ್ದರು.

ಸೇವಾ ಕಾರ್ಯಗಳು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಏಳು ವರ್ಷಗಳಲ್ಲಿ ಸುಮಾರು 8.5 ಕೋಟಿ ರೂಪಾಯಿ ಮೊತ್ತದ ಸೇವಾ ಯೋಜನೆಯನ್ನು ಕಲಾವಿದರಿಗೆ ವಿತರಿಸಲಾಗಿದೆ. ಐದು ಮಂದಿ ಕಲಾವಿದರಿಗೆ ತಲಾ ಒಂದು ಲಕ್ಷ ನಗದಿನೊಂದಿಗೆ ಪಟ್ಲ ಪ್ರಶಸ್ತಿ ನೀಡಲಾಗಿದೆ. ಗೃಹ ನಿರ್ಮಾಣಕ್ಕಾಗಿ 132 ಕಲಾವಿದರಿಗೆ ತಲಾ 25 ಸಾವಿರ ಧನಸಹಾಯ ವಿತರಣೆ, 145 ಅಶಕ್ತ ಕಲಾವಿದರಿಗೆ ತಲಾ ರೂಪಾಯಿ 50 ಸಾವಿರ ವಿತರಣೆ, ಪ್ರಾದೇಶಿಕ ಘಟಕಗಳ ವ್ಯಾಪ್ತಿಯಲ್ಲಿ ಸುಮಾರು 350 ಕಲಾವಿದರಿಗೆ ಸನ್ಮಾನ- ಸಹಿತ ಗೌರವ ಧನ ವಿತರಣೆ, ಅಪಘಾತ ವಿಮಾ ಯೋಜನೆಯಲ್ಲಿ ಪ್ರತಿ ವರ್ಷ 950 ಕಲಾವಿದರ ಹೆಸರು ದಾಖಲಾತಿ.

LEAVE A REPLY

Please enter your comment!
Please enter your name here