ಸಾಲ್ಮರ ಮೌಂಟನ್ ವ್ಯೂ ಆ.ಮಾ.ಶಾಲೆ, ಅಸ್ವಾಲಿಹಾ ಮಹಿಳಾ ಶರೀಅತ್, ಪಿಯು ಕಾಲೇಜ್‌ನಲ್ಲಿ ದಾಖಲಾತಿ ಆರಂಭ

0

ಪುತ್ತೂರು : ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಅಸ್ವಾಲಿಹಾ ಮಹಿಳಾ ಶರೀಅತ್ ಮತ್ತು ಪಿ.ಯು.ಕಾಲೇಜ್‌ನ ಶರೀಅತ್ ಮತ್ತು ಪಿ.ಯು.ವಿಭಾಗದ 2023-24ನೇ ಸಾಲಿನ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಮೌಂಟನ್ ವ್ಯೂ ಇಂಗ್ಲೀಷ್ ಮೀಡಿಯಂ ಎಲ್.ಕೆ.ಜಿಯಿಂದ ಎಸ್.ಎಸ್.ಎಲ್.ಸಿ. ವರೆಗೆ, ಕನ್ನಡ ಮಾಧ್ಯಮ 8ರಿಂದ 10ನೆಯ ತರಗತಿವರೆಗೆ ಹಾಗೂ ಶರಿಅತ್ ಮತ್ತು ಪಿ.ಯು.ಸಿ. ವಿಭಾಗದ ದಾಖಲಾತಿ ನಡೆಯುತ್ತಿದೆ. ಸಂಸ್ಥೆಯ ಅಧೀನದ ಅಸ್ವಾಲಿಹಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಪಿ.ಯು.ಸಿ.(ರೆಗ್ಯುಲರ್, ಸ್ಕಾಲರ್‌ಶಿಪ್ ಸೌಲಭ್ಯದೊಂದಿಗೆ)ಯೊಂದಿಗೆ ಶರೀಅತ್ ಕೋರ್ಸು ಹಾಗೂ ಶರೀಅತ್ ಮಾತ್ರ ಕಲಿಯುವವರಿಗೆ ಮೂರು ವರ್ಷಗಳ ಅಸ್ವಾಲಿಹಾ ಶರೀಅತ್ ಕೋರ್ಸನ್ನು ಇತರ ಕೋರ್ಸುಗಳೊಂದಿಗೆ ನೀಡಲಾಗುತ್ತಿದ್ದು, ಕಳೆದ ಆರು ವರ್ಷಗಳಲ್ಲಿ ಪಿ.ಯು. ಮತ್ತು ಶರೀಅತ್ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರು ಫಲಿತಾಂಶದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದು, ಪಿ.ಯು.ಸಿ.ಯಲ್ಲಿ ಸತತವಾಗಿ ಶೇ.100 ಫಲಿತಾಂಶ ದಾಖಲಿಸಿ ಮೀಫ್‌ನಿಂದ ಪ್ರಶಸ್ತಿಯನ್ನು ಪಡೆದಿರುವುದು ಗಮನಾರ್ಹವಾಗಿದೆ.

ಈ ವರ್ಷದಿಂದ ಪಿ.ಯು.ಸಿ.ಯೊಂದಿಗೆ ಪ್ರತಿಷ್ಟಿತ CSWC ಅಂಗೀಕೃತ ಎರಡು ವರ್ಷಗಳ ಫಾದಿಲಾ ಶರೀಅತ್ ಪಿ.ಯು. ಕೋರ್ಸನ್ನೂ ಆರಂಭಿಸಲಾಗಿದ್ದು, ವಿದ್ಯಾರ್ಥಿನಿಯರಿಗೆ ಪಾಳಿಲಾ ಅಥವಾ ಅಸ್ವಾಲಿಹಾ ಯಾವುದೇ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬಹುದು. ಇಸ್ಲಾಮಿಕ್ ಶರೀಅತ್ ಬಗೆಗಿನ ಅಧ್ಯಯನದೊಂದಿಗೆ ಆಧ್ಯಾತ್ಮಿಕ ಮಜ್ಲಿಸ್, ಶರೀಅತ್ ಪ್ರಾಕ್ಟಿಕಲ್ ಟ್ರೈನಿಂಗ್, ಕೈ ಬರಹ ಮಾಸಿಕ ಹಾಗೂ ಭಾಷಣ ಕಲೆ, ಲೇಖನಗಳ ವಿಶೇಷ ತರಬೇತಿ, ಇಸ್ಲಾಮೀ ಚೌಕಟ್ಟಿನಡಿ ಪ್ರತಿಭಾ ಪೋಷಣೆ, ಕುಟುಂಬ ನಿರ್ವಹಣೆ ತರಬೇತಿ, ಕಂಪ್ಯೂಟರ್ ಶಿಕ್ಷಣ, ವ್ಯಕ್ತಿತ್ವ ವಿಕಸನ ಕ್ಲಾಸ್, ಟೈಲರಿಂಗ್ ಕ್ಲಾಸ್, ಸ್ಮಾರ್ಟ್ ಕ್ಲಾಸ್ ಹೀಗೆ ಮೌಲ್ಯಾಧಾರಿತ ,ಗುಣಮಟ್ಟದ ಶಿಸ್ತು ಬದ್ದ ಉನ್ನತ ಧಾರ್ಮಿಕ-ಲೌಕಿಕ ಶಿಕ್ಷಣವನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಈಗಾಗಲೇ ನಾಲ್ಕು ಬ್ಯಾಚ್‌ನ ವಿದ್ಯಾರ್ಥಿನಿಯರು ಮೂರು ವರ್ಷಗಳ ಶಿಕ್ಷಣ ಪೂರೈಸಿ ’ಅಸ್ವಾಲಿಹಾ’ ಪದವಿಯನ್ನು ಪಡೆದಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9886864188, 9591046202, 9449105818, 08251-232389 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here