ಬಡವರ ಸಮಸ್ಯೆಗಳಿಗೆ ಮೊದಲ ಆದ್ಯತೆಯಲ್ಲಿ ಸೇವೆ ನೀಡಿ, ಶಾಸಕರಿಗೆ ದೂರು ಬಾರದಂತೆ ಕೆಲಸ ಮಾಡಿ -ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಬಡವರ ಸಮಸ್ಯೆಗಳಿಗೆ ಸೇವೆ ತಕ್ಷಣ ಸೇವೆ ಸಿಗಬೇಕು. ಬೇರೆಯವರಿಗೆ ಕೊಡುವುದು ಬೇಡ ಎಂದು ಹೇಳುವುದಿಲ್ಲ. ಆದರೆ ಮೊದಲ ಆದ್ಯತೆ ಬಡವರಿಗೆ ಇರಬೇಕು. ಇದರ ಜೊತೆಗೆ ಸೇವೆಯಲ್ಲಿ ತೊಂದರೆ ಆಗದಂತೆ ನೋಡಬೇಕು. ಈ ಕುರಿತು ಶಾಸಕರಿಗೆ ದೂರು ಬಾರದಂತೆ ಕೆಲಸ ನಿರ್ವಹಿಸಿ. ದೂರು ಬಂದಲ್ಲಿ ನಾನು ಖಂಡಿತಾ ಅದರ ಬಗ್ಗೆ ಗಮನ ಹರಿಸುತ್ತೇನೆ ಎಂದು ನೂತನ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.


ಅವರು ಪುತ್ತೂರು ನಗರಸಭೆಯಲ್ಲಿ ಮೇ 26ರಂದು ಅಧಿಕಾರಿಗಳ ಹಾಗು ಸಿಬ್ಬಂದಿಗಳ ಸಭೆಯಲ್ಲಿ ಆಡಳಿತದ ಮತ್ತು ಅಭಿವೃದ್ಧಿ ಕಾಮಗಾರಿಗಳ ಹಾಗೂ ಮನೆ ನಿವೇಶನ ಅರ್ಜಿ ಬಾಕಿ ಇರುವ ಕುರಿತು ಪರಿಶೀಲನೆ ಮಾಡಿ ಅಧಿಕಾರಿಗಳಿಗ ಸೂಕ್ತ ಮಾರ್ಗದರ್ಶನ ನೀಡಿದರು.

ಇದೇ ವೇಳೆ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಗರಸಭೆ ಅಧಿಕಾರಿಗಳ ಪರವಾಗಿ ಗೌರವ ಸಲ್ಲಿಸಲಾಯಿತು. ಇಲ್ಲೂ ಶಾಸಕರು ಸನ್ಮಾನಕ್ಕೆ ಆಸನ ಸ್ವೀಕರಿಸದೆ ನಿಂತುಕೊಂಡೇ ಗೌರವ ಸ್ವೀಕರಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಶಾಲು ಹೊದಿಸಿ, ಫಲಪುಷ್ಪ ನೀಡಿದರು. ಸದಸ್ಯ ಯೂಸೂಪ್ ಡ್ರೀಮ್ ಅವರು ಶಲ್ಯ ಹೊದಿಸಿದರು. ಈ ಸಂದರ್ಭ ನಗರಸಭೆ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್, ಕಚೇರಿ ವ್ಯವಸ್ಥಾಪಕ ಪಿಯುಸ್ ಡಿಸೋಜ, ಸಮುದಾಯ ಅಧಿಕಾರಿ ಕರುಣಾಕರ, ಎಫ್‌ಡಿಎ ಉಮಾನಾಥ, ಲೆಕ್ಕಿಗ ಸಿ.ಆರ್ ದೇವಾಡಿಗ, ಇಂಜಿನಿಯರ್ ಶ್ರೀಧರ್ ನಾಯ್ಕ್, ಕಂದಾಯ ಅಧಿಕಾರಿ ರಾಜೇಶ್ ನಾಯ್ಕ್, ರವೀಂದ್ರ, ರವಿಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here