ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ಅಮೃತ ಆರೋಗ್ಯ ಅಭಿಯಾನದಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಫಲಾನುಭವಿಗಳಿಗೆ ಗ್ರಾಮ ಆರೋಗ್ಯ ತಪಾಸಣಾ ಶಿಬಿರವು ಮೇ.26 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರು ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗಿರಿಜಾ, ಸದಸ್ಯರುಗಳಾದ ಶರತ್ ಕುಮಾರ್ ಮಾಡಾವು, ಬಟ್ಯಪ್ಪ ರೈ, ತಾರಾನಾಥ ಕಂಪ, ಜಯಂತ ಪೂಜಾರಿ ಕೆಂಗುಡೇಲು, ಆರೋಗ್ಯ ಸಹಾಯಕರಾದ ಭೀಮಾ ಶಂಕರ, ಸೌಮ್ಯ, ತಾಲೂಕು ಆರೋಗ್ಯ ಸಂಯೋಜಕಿ ಅಶ್ವಿನಿ, ನರೇಗಾ ಕಾರ್ಯಕ್ರಮ ಸಂಯೋಜಕ ಭರತ್‌ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ನರೇಗಾ ಯೋಜನೆಯ 46 ಫಲಾನುಭವಿಗಳು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದ್ದರು.