ರೋಟರಿ ಕ್ಲಬ್ ಪುತ್ತೂರು ಸಿಟಿಯಿಂದ ನೆಲ್ಲಿಕಟ್ಟೆ ಶಾಲಾ ಆವರಣ ಸ್ವಚ್ಚತೆ-ವಾಟರ್ ಫ್ಯೂರಿ ಫೈಯರ್ ಕೊಡುಗೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿಯ ವತಿಯಿಂದ ನೆಲ್ಲಿಕಟ್ಟೆ ಹಿ.ಪ್ರಾ ಶಾಲಾ ವಠಾರವನ್ನು ಶುಚಿಗೊಳಿಸಿ, ಶಾಲಾ ಗೊಡೆಗೆ ಬಣ್ಣ ಬಳಿಯಲಾಯಿತು.
ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಶೆಣೈಯವರು ಪೈಂಟ್, ಯು.ಪಿ ರಾಜೇಶ್ ಯವರು ವಾಟರ್ ಫ್ಯೂರಿ ಫೈಯರ್ ಕೊಡುಗೆ ನೀಡಿದರು. ಲಾರೆನ್ಸ್ ಗೊನ್ಸಾಲ್ವೀಸ್ ಜೆಸಿಬಿ ಮೂಲಕ ಕೆಲಸ ಕಾರ್ಯಗಳನ್ನು ಉಚಿತವಾಗಿ ನಡೆಸಿಕೊಟ್ಟರು.

ಪುತ್ತೂರು ರೋಟರಿ ಸಿಟಿ ಟ್ರಸ್ಟ್ ನ ಅಧ್ಯಕ್ಷ ಜಿ.ಸುರೇಂದ್ರ ಕಿಣಿ, ಸುಧಾಕರ್ ಶೆಟ್ಟಿ, ಮನೋಹರ್ ಕೆ, ಪ್ರಮೋದ್ ಮಲ್ಲಾರ್, ಜೋಡಿಸೋಜ, ಲಾರೆನ್ಸ್ ಗೊಂನ್ಸಲ್ವಿಸ್, ಇಜಾಜ್, ಪಿ.ಉಲ್ಲಾಸ.ಪೈ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪಂಚಾಕ್ಷರಿ ಉಪಸ್ಥಿತರಿದ್ದರು. ಶಾಲೆಯ ಮೇಲಿನ ಅಭಿಮಾನದಿಂದ ಸಹಕರಿಸಿದವರಿಗೆ ಶಾಲಾ ಮುಖ್ಯಗುರು ಯಶೋಧ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here