ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ತಿಂಗಳಾಡಿ ಶಾಲಾ ವಿದ್ಯಾರ್ಥಿನಿ ಆಯ್ಕೆ

0

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಆಸ್ಮಿತಾ ಎಸ್ 2022-23ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿರುತ್ತಾರೆ. ಇವರು ಅರಿಯಡ್ಕ ಶುಂಠಿಮಜಲು ನಿವಾಸಿ ಅವಿನಾಶ್ ಮತ್ತು ಸುಜಾತ ಅವರ ಸುಪುತ್ರಿಯಾಗಿರುತ್ತಾರೆ. ಈ ವಿದ್ಯಾರ್ಥಿ ವೇತನವು ವಾರ್ಷಿಕ ರೂಪಾಯಿ 12000 ದಂತೆ 4 ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಒಟ್ಟು ರೂಪಾಯಿ 48000 ಮೊತ್ತವನ್ನು ಒಳಗೊಂಡಿರುತ್ತದೆ. ಶಾಲಾ ಮುಖ್ಯ ಶಿಕ್ಷಕಿ ವಿಜಯಾ ಕೆ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕರಾದ ನಿರಂಜನ ಎಂ ಜೆ, ಜಾನಕಿ ಬಿ ಎಸ್, ಮಮತಾ ಸಿ ಎಚ್, ಮಮತಾ ಸಿ, ಶ್ರುತಿ ಎ, ಸೌಮ್ಯ ರೈ, ತರಬೇತಿ ವೇತನ ನೀಡುತ್ತಾರೆ.

LEAVE A REPLY

Please enter your comment!
Please enter your name here