ಕೆಯ್ಯೂರು-ನೂಜಿ ಗುಡ್ಡಕ್ಕೆ ಬೆಂಕಿ, ತಪ್ಪಿದ ಅನಾಹುತ

0

ಪುತ್ತೂರು: ವಿದ್ಯುತ್ ವಯರ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಮೇ.28 ರಂದು ಕೆಯ್ಯೂರು ಗ್ರಾಮದ ನೂಜಿಯಲ್ಲಿ ನಡೆದಿದೆ. ನೂಜಿ ಮುತ್ತಪ್ಪ ರೈ ಎಂಬವರ ಮನೆಗೆ ಹೋಗುವ ವಿದ್ಯುತ್ ತಂತಿಗಳು ಜೋತು ಬಿದ್ದು ನೆಲದ ಸಮಕ್ಕೆ ಇರುವುದರಿಂದ ಈ ಅವಘಡ ಸಂಭವಿದೆ ಎನ್ನಲಾಗಿದೆ. ಬೆಂಕಿ ಬಿದ್ದ ಪರಿಣಾಮ ನೂಜಿ ವೇಣುಗೋಪಾಲ ರೈಯವರಿಗೆ ಸೇರಿದ ಗುಡ್ಡ ಬಹುತೇಕ ಸುಟ್ಟು ಹೋಗಿದೆ.

ಬೆಂಕಿ ಬಿದ್ದ ತಕ್ಷಣವೇ ದಂಬೆಕ್ಕಾನ ಸದಾಶಿವ ರೈಯವರು ಅಗ್ನಿ ಶಾಮ ದಳಕ್ಕೆ ಕರೆ ಮಾಡಿದ್ದು ಕರೆ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಎ.ಕೆ ಜಯರಾಮ ರೈಯವರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಎ.ಕೆ ಜಯರಾಮ ರೈಯವರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರ ಕ್ಷಿಪ್ರ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಂಬೆಕ್ಕಾನ ಸದಾಶಿವ ರೈಯವರ ಜಾಗವೂ ಇದೇ ಭಾಗದಲ್ಲಿದ್ದು ಅಗ್ನಿ ಶಾಮಕ ದಳಕ್ಕೆ ಬೇಕಾದ ನೀರಿನ ವ್ಯವಸ್ಥೆಯನ್ನು ಸದಾಶಿವ ರೈಯವರು ಮಾಡಿಕೊಟ್ಟಿದ್ದಲ್ಲದೆ, ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಮೆಸ್ಕಾಂಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ತಂತಿಯ ಜೋತು ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೆಸ್ಕಾಂ ಪವರ್‌ಮ್ಯಾನ್ ಗಣೇಶ್‌ರವರು ವಿದ್ಯುತ್ ಲೈನ್ ಆಫ್ ಮಾಡಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು. ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಸಹಿತ ಸ್ಥಳೀಯ ಹಲವು ಮಂದಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here