ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ-ಮಕ್ಕಳಿಗೆ ಸಾಂಪ್ರದಾಯಿಕ ಸ್ವಾಗತ

0

ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಮೇ.29 ರಂದು ನಡೆಯಿತು.


ಶಾಲಾ ಮುಖ್ಯ ದ್ವಾರದ ಬಳಿಯಿಂದ ವರಾಂಡದವರೆಗೆ ವಿಶೇಷ ಅಲಂಕಾರದ ಸ್ವಾಗತ ದ್ವಾರ ಮಾಡಲಾಗಿತ್ತು. ನಂತರ ವಿವೇಕಾನಂದರ ಭಾವಚಿತ್ರದ ಎದುರು ವಿದ್ಯಾದೇವತೆ ಸರಸ್ವತಿ, ಓಂಕಾರ ಮತ್ತು ತಾಯಿ ಭಾರತಿಯ ಭಾವಚಿತ್ರಗಳಿಗೆ ಮಕ್ಕಳಿಂದ ಪುಷ್ಪಾರ್ಚನೆ ನಡೆಯಿತು. ಬಳಿಕ ಶಿಕ್ಷಕಿಯರು ಮಕ್ಕಳಿಗೆ ಆರತಿ ಎತ್ತಿ ತಿಲಕವಿಟ್ಟು ತರಗತಿಯೊಳಗೆ ಬರಮಾಡಿಕೊಂಡರು.


ಇದೇ ವೇಳೆ ಶಾಲಾ ಸಂಚಾಲಕ ರವಿನಾರಾಯಣ ಮತ್ತು ಆಡಳಿತ ಮಂಡಳಿಯವರು, ಮುಖ್ಯಗುರು ಸತೀಶ್ ಕುಮಾರ್ ರೈ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಂಧ್ಯಾ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಮಮತಾ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here