ಆನೆ ಹಾವಳಿಯಿಂದ ರಕ್ಷಣೆ ನೀಡಲು ಸರಕಾರ ಕಾರ್ಯಪ್ರವೃತ್ತವಾಗಬೇಕು -ಬಿ ಎಮ್ ಭಟ್

0

ಪುತ್ತೂರು: ಕಡಬ ತಾಲೂಕಿನಲ್ಲಿ ನಿರಂತರ ಆನೆಯ ಹಾವಳಿಯಿಂದ ಜನರು ಜೀವ ಭಯದಿಂದ ಬದುಕುವಂತಾಗಿರುವುದರಿಂದ ರಕ್ಷಣೆ ಮಾಡಲು ಸರಕಾರ ತಕ್ಷಣ ಕಾರ್ಯ ಪ್ರವೃತ್ತರಾಗಬೇಕೆಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರ ಜೀವಕ್ಕೆ ಅಪಾಯವಾಗುತ್ತಿರುವುದು ನಮ್ಮ ಕಣ್ಣಮುಂದೇ ಇದ್ದರೂ ಅದರ ಬಗ್ಗೆ ಸರಕಾರ ಗಮನ ನೀಡದಿರುವುದು ಖಂಡನೀಯ. ಬಿಜೆಪಿ ಸರಕಾರ ಆನೆತಡೆಗೆ ಯಾವುದೇ ವ್ಯವಸ್ಥೆಮಾಡದೇ ಜನರ ಸಾವಿಗೆ ಕಾರಣವಾಗಿತ್ತು. ಇದೀಗ ಪುನಃ ಆನೆಯ ದಾಳಿ ನಡೆದಿದ್ದು, ಆನೆಯ ತುಳಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಜನರ ಜೀವ ರಕ್ಷಣೆ ಮಾಡುವುದು ಸರಕಾರದ ಮೂಲಭೂತ ಕರ್ತವ್ಯವಾಗಿದೆ. ಜನರ ಜೀವದ ರಕ್ಷಣೆ ಮಾಡಲಾಗದ ಸರಕಾರಗಳು ಕಸ್ತೂರಿರಂಗನ್ ವರದಿ ಜಾರಿ ಮಾಡದರೆ ಏನಾಗಬಹುದು. ಪರಿಸರರಕ್ಷಣೆ ಆಗಬೇಕಾಗಿರುವುದೇ ಜನರ ಬದುಕಿಗೆ ಎನ್ನುವ ಸರಕಾರ ಇಲ್ಲಿ ಕಾಡು ಮೃಗಗಳ ಮೂಲಕ ಜನರ ಹತ್ಯೆ ನಡೆಸುತ್ತಿದೆ. ಜನರ ಜೀವವನ್ನೇ ತೆಗೆಯುತ್ತಿರುವ ಕಾಡು ಮೃಗಗಳಿಂದ ರಕ್ಷಣೆ ಮಾಡಲಾಗದ ಸರಕಾರ ಪರಿಸರ ರಕ್ಷಣೆ ಮಾಡುವುದಾದರೂ ಯಾಕೆ ? ಆದ್ದರಿಂದ ಇನ್ನು ಮುಂದೆ ನಮ್ಮ ಸರಕಾರಗಳು, ಜನಪ್ರತಿನಿಧಿಗಳು ಆನೆ ಮೊದಲಾದ ಯಾವುದೇ ಕಾಡುಮೃಗಗಳಿಂದ ಅಪಾಯಬಾರದಂತೆ ಬಡಜನರ ಬದುಕಿಗೆ ಆಸರೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here