ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟ್ರಾ-ಡಿಪಾರ್ಟ್ಮೆಂಟ್ ಐ ಟಿ ಫೆಸ್ಟ್‌ “ವಿಷನ್‌ 2023”

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ವಿಷನ್‌ 23ರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮೇ.26 ರಂದು ಆಯೋಜಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿಪ್ರಕಾಶ್‌ ಮೊಂತೆರೊರವರು ವಹಿಸಿ “ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತವೆ. ಕಾಲೇಜು ಮಟ್ಟದ ಸ್ಪರ್ಧೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸುತ್ತವೆ. ತಂಡದೊಡನೆ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳು ನಾಯಕತ್ವ ಗುಣ, ವಿಶ್ಲೇಷಣಾ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ, ಒತ್ತಡ ನಿರ್ವಹಣೆ ಇವೇ ಮೊದಲಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಈ ಕೌಶಲ್ಯಗಳು ಮುಂದೆ ಔದ್ಯೋಗಿಕ ಜೀವನದಲ್ಲಿ ಸಹಕಾರಿಯಾಗುತ್ತವೆ. ಸ್ಪರ್ಧೆಯಲ್ಲಿನ ಗೆಲುವು ನಮಗೆ ಪ್ರಶಸ್ತಿಯನ್ನು ತಂದುಕೊಟ್ಟರೆ ಸೋಲು ಜೀವನಪಾಠ ಹೇಳಿಕೊಡುತ್ತದೆ. ಒಟ್ಟಾರೆ ಗೆದ್ದವರಿಗೂ ಸೋತವರಿಗೂ ಸಿಗುವ ಅನುಭವದ ಬುತ್ತಿ ಅಪರೂಪವಾದುದು ” ಎಂದು ಹೇಳಿದರು.

ವಿದ್ಯಾರ್ಥಿನಿಯರಾದ ದಿಶಾ ಮತ್ತು ಅಪೂರ್ವ ಪ್ರಾರ್ಥಿಸಿದರು. ವಿನ್ಯಾಕಲ್‌ ಐ ಟಿ ಕ್ಲಬ್‌ನ ಸಂಯೋಜಕಿ ರಾಜೇಶ್ವರಿ ಎಂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಭಾಗ ಮುಖ್ಯಸ್ಥರಾದ ವಿನಯಚಂದ್ರ ವಂದಿಸಿದರು. ಪ್ರಾಧ್ಯಾಪಕಿ ವಾರಿಜಾ ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು. ಪ್ರಾಧ್ಯಾಪಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ವಿನ್ಯಾಕಲ್‌ ಐ ಟಿ ಕ್ಲಬ್‌ನ ಅಧ್ಯಕ್ಷ ಜಾನ್‌ ವಿಸ್ಟನ್‌ ಟೈಟಸ್‌ ಡಯಾಸ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಷನ್‌ 23 ರಲ್ಲಿ ಮೋಡೆಲ್‌ ಮೇಕಿಂಗ್‌, ಪೇಪರ್‌ ಪ್ರೆಸಂಟೇಶನ್‌, ಕೊಲ್ಯಾಜ್‌, ಕೋಡ್‌ವಾರ್‌, ವೆಬ್‌ಡಿಸೈನ್‌, ಇ-ಗೇಂಮಿಂಗ್‌, ಪ್ರಾಜೆಕ್ಟ್‌ ಲೀಡ್‌, ಡಾಕ್ಯುಮೆಂಟರಿ, ಐಟಿಕ್ವಿಜ್‌, ಹಾಗೂ ಗ್ರೂಪ್‌ಡಾನ್ಸ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಾಧ್ಯಾಪಕರಾದ ತೇಜಸ್ವಿ ಭಟ್‌, ಧನ್ಯ ಪಿ.ಟಿ, ಡಾ.ಡಿಂಪಲ್‌ ಫೆರ್ನಾಂಡಿಸ್‌, ಪ್ರಜ್ವಲ್‌ ರಾವ್‌, ಚೈತ್ರ, ಧನ್ಯಶ್ರೀ ಹಾಗೂ ನೀಲಮ್‌ ಕುಟ್ಟಪ್ಪ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಒಟ್ಟು 15 ತಂಡಗಳು ಭಾಗವಹಿಸಿದ್ದು, ಪ್ರಖ್ಯಾತ್‌ ನೇತೃತ್ವದ ಎರರ್‌ ಎಂಪರರ್ಸ್‌ ತಂಡಕ್ಕೆ ತೃತೀಯ, ಕಾರ್ತಿಕ್‌ ಕೆ ಆರ್‌ ನೇತೃತ್ವದ ವೆಬ್‌ ಸ್ಪೈಡರ್ಸ್‌ ತಂಡಕ್ಕೆ ದ್ವಿತೀಯ ಬುಹುಮಾನ ದೊರೆತರೆ ಜಾನ್‌ ವಿಸ್ಟನ್‌ ಟೈಟಸ್‌ ಡಯಾಸ್‌ ನೇತೃತ್ವದ ಐಟಿ ಇಲೈಟ್ಸ್‌ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿತು.

LEAVE A REPLY

Please enter your comment!
Please enter your name here